ಬೆಳ್ಳಿ ಮಹೋತ್ಸವದಲ್ಲಿ ಕನಕ ಬ್ಯಾಂಕ್‌ `ಕನಕ ಸಿರಿ’ ಠೇವಣಿ ಪತ್ರ ಬಿಡುಗಡೆ

ದಾವಣಗೆರೆ, ಫೆ.20- ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದಾದ ಕನಕ ಪಟ್ಟಣ ಸಹಕಾರಿ ಬ್ಯಾಂಕ್ ತನ್ನ ಸ್ಥಾಪನೆಯ 25ನೇ ವರ್ಷದ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ.

ಈ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬದ ವರ್ಷವನ್ನು ಸವಿ ನೆನಪಿನಲ್ಲಿ ಉಳಿಸುವ ನಿಟ್ಟಿನಲ್ಲಿ `ಕನಕ ಸಿರಿ’ ಹೊಸ ಠೇವಣಿ ಪತ್ರ ಮತ್ತು ಬ್ಯಾಂಕಿನ ಲೋಗೋ ಹೊಂದಿರುವ 2022ನೇ ಸಾಲಿನ ದಿನಚರಿ (ಕ್ಯಾಲೆಂಡರ್) ಬಿಡುಗಡೆ ಮಾಡಲಾಗಿದೆ.

ಹಿರಿಯ ನ್ಯಾಯವಾದಿಯೂ ಆಗಿರುವ ಕನಕ ಬ್ಯಾಂಕಿನ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ `ಕನಕ ಸಿರಿ’ ಠೇವಣಿ ಪತ್ರ ಹಾಗೂ ಕ್ಯಾಲೆಂಡರ್ ಅನ್ನು ಗ್ರಾಹಕರ ಸೇವೆಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸಿದ್ದಪ್ಪ, ಸುದೀರ್ಘ 25 ವರ್ಷಗಳ ಕಾಲ ಕನಕ ಬ್ಯಾಂಕ್ ಮುನ್ನಡೆಯುವುದರ ಜೊತೆಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರಲು ಕಾರಣರಾದ ಎಲ್ಲರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಕನಕ ಬ್ಯಾಂಕ್ ಸಂಸ್ಥಾಪಕರು ಹೊತ್ತಿದ್ದ ಆಶಯಗಳನ್ನು ಈಡೇರಿಸುವುದರ ಮೂಲಕ ಬ್ಯಾಂಕ್ ಪ್ರಗತಿದಾಯಕವಾಗಿ ಕೊಂಡೊಯ್ಯುವುದರಲ್ಲಿ ಸದಸ್ಯರು – ಗ್ರಾಹಕರು – ಠೇವಣಿದಾರರ ಸಹಕಾರ – ಪ್ರೋತ್ಸಾಹ, ಸಿಬ್ಬಂದಿ ವರ್ಗದವರ ಶ್ರಮ, ಆಡಳಿತ ಮಂಡಳಿ ಸದಸ್ಯರ ಇಚ್ಛಾಶಕ್ತಿ ಕಾರಣವಾಗಿದೆ ಎಂದು ಸಿದ್ದಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಾಧ್ಯಕ್ಷರಾದ ಶ್ರೀಮತಿ ಕೆ.ಜಿ. ತಾಯಮ್ಮ ಮಾತನಾಡಿ, ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದ ಹೇಳಿದರು.

ನಿರ್ದೇಶಕರುಗಳಾದ ಪಿ. ರಾಜಕುಮಾರ್, ಹೆಚ್.ಜಿ. ಸಂಗಪ್ಪ, ಕೆ.ಆರ್. ಭರಮಪ್ಪ, ಕೆ.ಎನ್. ನೀಲಪ್ಪ, ಬಿ.ದಿಳ್ಳೆಪ್ಪ, ಪಿ. ಚೌಡಪ್ಪ, ಹೆಚ್.ಎಂ.ಗೋಣೆಪ್ಪ, ಎಸ್. ಸಂಗೇಗೌಡ, ಕೆ.ಪರಶುರಾಮ್, ಎಸ್.ಹೆಚ್. ಕಾಂತೇಶ್, ಟಿ.ಎನ್. ಪ್ರಕಾಶ್, ಶ್ರೀಮತಿ ಸುಧಾ, ವೃತ್ತಿಪರ ನಿರ್ದೇಶಕ ಆರ್. ಆನಂದ್, ವಿಶೇಷ ಆಹ್ವಾನಿತರಾದ ಕೆ.ರೇವಣಸಿದ್ದಪ್ಪ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ವ್ಯವಸ್ಥಾಪಕ ಬಿ.ಎಲ್. ಗೌಡ ಕಾರ್ಯಕ್ರಮ ನಿರ್ವಹಿಸಿದರು. ಲೆಕ್ಕಾಧಿಕಾರಿ ದೇವಜ್ಜಿ ರಮೇಶ್ ಸ್ವಾಗತಿಸಿ, ವಂದಿಸಿದರು.

ಹಿರಿಯ ಸಹಾಯಕರಾದ ಶ್ರೀಮತಿ ಕೆ.ಎಸ್. ರೇಣುಕ, ಶ್ರೀಮತಿ ಬಿ.ಕೆ. ವಿಜಯ, ಸಹಾಯಕ ಲೆಕ್ಕಾಧಿಕಾರಿ ಶ್ರೀಮತಿ ಕೆ. ರೇಖಾ, ಕಿರಿಯ ಸಹಾಯಕರಾದ ಶ್ರೀಮತಿ ಬಿ.ಜೆ. ನೇತ್ರಾವತಿ, ಹೆಚ್.ಆರ್. ಉಮೇಶ್, ಹೆಚ್.ಎಸ್. ಪರಶುರಾಮ್, ಡಿ.ಹೆಚ್. ಮಾರುತಿ ಮತ್ತು ಇತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.

error: Content is protected !!