ಭದ್ರಾ ಮೇಲ್ದಂಡೆ, ರಾಷ್ಟ್ರೀಯ ಮಾನ್ಯತೆ

ಜಗಳೂರು, ಫೆ.20- ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರದ ಹೈಪವರ್ ಸಮಿತಿ ಅನು ಮೋದನೆ ನೀಡಿದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಂತರ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ, ಭದ್ರಾ ಮೇಲ್ದಂಡೆ ಯೋಜನೆಗೆ 1336 ಕೋಟಿ ಅನುದಾನದಲ್ಲಿ  ಶೇ‌.  75 ಕೇಂದ್ರ ಜಲ ನಿಗಮದಿಂದ ನೀಡುತ್ತದೆ. ಶೇ‌.25 ರಾಜ್ಯಸರ್ಕಾರ ಬಿಡುಗಡೆಗೊಳಿಸಿ, ರಾಷ್ಟ್ರೀಯ ಯೋಜನೆಯನ್ನಾಗಿ ಅನುಮೋದನೆ ನೀಡಿದೆ. ಕನಸಿನ ಮಹತ್ತರ ಯೋಜನೆ ನಮ್ಮದೇ ರಾಜ್ಯ ಸರ್ಕಾರ ಹಾಗೂ ಸಂಸದ ಜಿ.ಎಂ ಸಿದ್ದೇಶ್ವರ ಅವರ ಶ್ರಮದಿಂದ ಸಾಕಾರಗೊಂಡಿದೆ  ಎಂದರು.

ನಿರಂತರ ಪರಿಶ್ರಮ ನಡೆಸಿದ ಭದ್ರಾ ಮೇಲ್ದಂಡೆ  ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಅವರ ನೇತೃತ್ವದ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳಿಗೆ ಅಭಿನಂದಿಸುತ್ತೇನೆ ಎಂದರು.

ಸಂಸದ ಸಿದ್ದೇಶ್ವರ ಪುತ್ರ  ಜಿ.ಎಸ್.ಅನಿತ್ ಮಾತನಾಡಿ, ನನ್ನ ತಂದೆ ಅವರ ಜೊತೆಗೂಡಿ ಇಚ್ಛಾಶಕ್ತಿಯಿಂದ  ಶಾಸಕ ಎಸ್.ವಿ.ರಾಮಚಂದ್ರ ಅವರು ಭದ್ರಾ ಮೇಲ್ದಂಡೆ ಹಾಗೂ ನೀರಾವರಿ ಕಡತಗಳ ಮಂಜೂರಾತಿಗೆ ಬೆನ್ನತ್ತಿದ  ಹೋರಾಡಿದ ಫಲವಾಗಿ ಯೋಜನೆಗಳು ಸಾಕಾರಗೊಂಡು ತಾಲ್ಲೂಕಿಗೆ ಶೀಘ್ರ ನೀರು ಹರಿಯಲಿದೆ. ಇದರಿಂದ  ರೈತರ ಸಂಕಷ್ಟ ದೂರವಾಗಿ ಸಮೃದ್ಧಿ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಶಾಸಕರ ಪತ್ನಿ ಇಂದಿರಾ ರಾಮಚಂದ್ರ, ಪುತ್ರ ಅಜಯೇಂದ್ರ ಸಿಂಹ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಪ.ಪಂ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷೆ ಮಂಜಮ್ಮ, ಮುಖಂಡರಾದ ಜೆ.ವಿ.ನಾಗರಾಜ್, ಮಲ್ಲೇಶ್, ಶಿವಕುಮಾರ್, ವಕೀಲ ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!