ಮಹಾನ್ ಚೇತನಗಳ ಕನಸುಗಳ ಬಗ್ಗೆ ಗೋಡೆ ಬರಹ

ದಾವಣಗೆರೆ, ಫೆ.18- ಇತ್ತೀಚೆಗೆ ರಾಜ್ಯದಲ್ಲಿ ಉಂಟಾಗಿರುವ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ರಾಜ್ಯ ಸಮಿತಿಯು ವೈಜ್ಞಾನಿಕ-ಧರ್ಮನಿರಪೇಕ್ಷ- ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ ಹಾಗೂ ನೇತಾಜಿ, ಭಗತ್ ಸಿಂಗ್ ಅವರ ಕನಸುಗಳನ್ನು ನನಸಾಗಿಸಲು ಒಂದು ವಿನೂತನ ಮಾದರಿಯ ಪ್ರಚಾರ ಕೈಗೊಂಡಿದೆ.

ರಾಜ್ಯಾದ್ಯಂತ 15 ಕ್ಕು ಹೆಚ್ಚು ಜಿಲ್ಲೆಗಳಲ್ಲಿ ಗೋಡೆ ಬರಹಗಳ ಮೂಲಕ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ವೈಜ್ಞಾನಿಕ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಲಾಗಿದೆ.

ಶಿಕ್ಷಣ ಹಾಗೂ ರಾಜಕೀಯದಲ್ಲಿ ಧರ್ಮ ಬರಬಾರದು, ಸಾಮಾಜಿಕ ಕಾನೂನುಗಳನ್ನು ರೂಪಿಸುವಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ ಹಾಗೂ ಮುಂತಾದ ಕೋಮು ಸಾಮರಸ್ಯದ ಕುರಿತು ಸ್ವಾಮಿ ವಿವೇಕಾನಂದ, ಕುವೆಂಪು,
ಭಗತ್ ಸಿಂಗ್, ನೇತಾಜಿ ಮುಂತಾದ ಮಹಾನ್ ವ್ಯಕ್ತಿಗಳ ಸೂಕ್ತಿಗಳ ಗೋಡೆ ಬರಹವನ್ನು ಬರೆಯಲಾಯಿತು.

ರಾಜ್ಯದ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರಿಂದ ಈ ಮಾದರಿಯ ಪ್ರಯತ್ನಕ್ಕೆ ಸಕಾರಾತ್ಮಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

error: Content is protected !!