ದಾವಣಗೆರೆ, ಫೆ.16- ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ನ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಿಯ ರಥೋತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.
ಶ್ರೀಮತಿ ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದೇವಿಯ ದರ್ಶನ ಪಡೆದು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಖಜಾಂಚಿ ರಮೇಶ್ ಕಡೆಕೊಪ್ಪ, ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರುಗಳು ಪ್ರಭಾ ಅವರನ್ನು ಸನ್ಮಾನಿಸಿದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಪಾಲಿಕೆ ಸದಸ್ಯರುಗಳಾದ ಶ್ರೀಮತಿ ಸುಧಾ ಹಿಟ್ಟಿಗುಡಿ ಮಂಜುನಾಥ, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ ಭಾಗವಹಿಸಿದ್ದರು.
ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಬಿ.ವಿ.ಶ್ರೀಧರಮೂರ್ತಿ, ವಕೀಲ ಪ್ರಕಾಶ್ ಪಾಟೀಲ್, ಚಲ್ಪತಿ, ನಟರಾಜ್ ಉಮೇಶಣ್ಣ, ಸಾಮಾಜಿಕ ಸೇವಾಕರ್ತ ಕೆ.ಎಂ.ವೀರಯ್ಯ ಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.