ಜಗಳೂರು : ಪಿಂಜಾರ್ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯಿಸಿ ಮನವಿ

ಜಗಳೂರು, ಫೆ.11- ಸಾಮಾಜಿಕ ವಾಗಿ, ಆರ್ಥಿಕ ವಾಗಿ ಸಂಕಷ್ಟದಲ್ಲಿರುವ ನದಾಫ್, ಪಿಂಜಾರ್ ಸಮಾ ಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸಮಿತಿಯ ಆದೇಶದಂತೆ ಇಂದು ತಾಲ್ಲೂಕು ನದಾಫ್ ಪಿಂಜಾರ್ ಸಂಘದ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷ ಜನ ಸಂಖ್ಯೆ ಹೊಂದಿರುವ ನದಾಫ್, ಪಿಂಜಾರ್ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮಾಜವಾಗಿದೆ. ಸಂಕಷ್ಟದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ಇಸ್ಲಾಂ ಧರ್ಮದ ಆಚರಣೆ ಹೊಂದಿರುವ ನದಾಫ್, ಪಿಂಜಾರ್ ಸಮಾಜವು ಬಹುವಾಗಿ ಭಾರತೀಯ ಹಿಂದೂ ಧಾರ್ಮಿಕ ಆಚರಣೆ, ವಿಚಾರಣೆ, ಸಂಸ್ಕಾರಗಳ ಪಾಲಿಸುತ್ತಾ, ಎಲ್ಲ ಧರ್ಮಗಳೊಂದಿಗೆ ಸಹಬಾಳ್ವೆಯಿಂದ ಜೀವನ ಸಾಗಿಸುವ ವಿಶಿಷ್ಟ ಕೋಮು ಸೌಹಾರ್ದತೆಯ ಜೀವನ ಪದ್ಧತಿ ಹೊಂದಿದೆ. ಶೀಘ್ರ ನಿಗಮವನ್ನು ಸ್ಥಾಪಿಸಿ ಸಮಾಜದ ಅಭಿವೃದ್ಧಿಗೆ ನೆರವಾಗಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಟಿ. ಸುಭಾನ್, ರಾಜ್ಯ ಸಮಿತಿ ಸದಸ್ಯ ಬಿ.ಪಿ. ಸುಭಾನ್, ಸದಸ್ಯ ರಾದ ಖಾಸೀಮ್ ಸಾಬ್, ಹೊನ್ನೂರ್ ಅಲಿ, ಜಿ.ಹೆಚ್.ಹಜರತ್ಅಲಿ, ಮುನಾಫ್, ಹೊನ್ನೂರ್ ಸಾಬ್, ಮೌಲು ದ್ದೀನ್ ಮುಖಂಡರಾದ ಹೆಚ್.ರಹಮಾನ್ ಮತ್ತಿತರರಿದ್ದರು.

error: Content is protected !!