ಈ ಬಾರಿ ಬಜೆಟ್‌ನಲ್ಲಿ ರೈತರಿಗೆ ಒಳ್ಳೆಯ ಸುದ್ದಿ

ಭರಮಸಾಗರ, ಫೆ.11- ಬಸವರಾಜ್ ಬೊಮ್ಮಾಯಿ ಅವರು ಅನ್ನದಾತರ ಪರವಾಗಿದ್ದಾರೆ. ಈ ಬಾರಿಯ ಬಜೆಟ್‌ ರೈತರ ಅಭಿವೃದ್ಧಿಗೆ ಪೂರಕ ಬಜೆಟ್ ಆಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. 

ಚಿತ್ರದುರ್ಗ ತಾಲ್ಲೂಕು ಭರಮಸಾಗರ ಹೋಬಳಿಯ ಬೇಡರ ಶಿವನಕೆರೆ ಗ್ರಾಮದಲ್ಲಿ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷ ಪೂರೈಸಿದ ನೆನಪಿಗೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಶುಕ್ರವಾರ’ ಅನ್ನದಾತರೊಂದಿಗೆ ಅಂತ ರಾಳದ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಮೊದಲ ಸಭೆಯಲ್ಲಿ ರೈತ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯನ್ನು ನೀಡುವ ಮೂಲಕ ರೈತರ ಮಕ್ಕಳಿಗೆ ನೆರವಾಗಿದ್ದಾರೆ. ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪ್ರಗತಿಗಾಗಿ ಪ್ರತಿ ಮಗುವಿಗೂ 2000 ಹಣವನ್ನು ನೀಡುತ್ತಿದ್ದಾರೆ ಎಂದರು. 

ಕೃಷಿಯಲ್ಲಿ ಸಮಗ್ರ ನೀತಿ ಅಳವಡಿಸಿ ಕೊಂಡರೆ ಮಾತ್ರ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಂ. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಕುಮಾರ್. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ರಾಜ್ಯ ಕೃಷಿ ಇಲಾಖೆ ನಿರ್ದೇಶಕರಾದ ನಂದಿನಿ ಕುಮಾರ್, ಬಿಜೆಪಿ ಮಂಡಲ್ ಅಧ್ಯಕ್ಷ ಶೈಲೇಶ್ ಕುಮಾರ್, ಡಿ.ವಿ. ಪ್ರದೀಪ್, ಕಲ್ಲೇಶ್, ಬಸವರಾಜ್,  ಮಂಜುನಾಥಪ್ಪ, ಚಿತ್ರದುರ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎನ್. ಚಂದ್ರಕುಮಾರ್, ಪ್ರಭಾಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಚಿತ್ರದುರ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕರಾದ ಎಚ್.ಹುಲಿರಾಜ್ ವಂದಿಸಿದರು. ಈ ವೇಳೆ ಪ್ರಗತಿ ಪರ ಕೃಷಿಕ ಹಾಗೂ ಸಂವಾದ ಕಾರ್ಯಕ್ರಮದ ಆಯೋಜಕ ಗಿರೀಶ್ ದಂಪತಿ ಯನ್ನು ಸಚಿವ ಬಿ.ಸಿ.ಪಾಟೀಲ್ ಸನ್ಮಾನಿಸಿದರು.  

error: Content is protected !!