ದಾವಣಗೆರೆ, ಫೆ.10- ನಗರ ಪಾಲಿಕೆ 30ನೇ ವಾರ್ಡಿನ ಹೊಸ ಚಿಕ್ಕನಹಳ್ಳಿಯಲ್ಲಿ 19 ಲಕ್ಷ ರೂ.ನ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಮಹಾಪೌರ ಎಸ್.ಟಿ.ವೀರೇಶ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್ ಹಾಗೂ 30ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಜಯಮ್ಮ ಗೋಪಿ ನಾಯಕ್, ಬಿಜೆಪಿ ಮುಖಂಡರಾದ ಗೋಪಿ ನಾಯಕ್, ವಾರ್ಡ್ ಅಧ್ಯಕ್ಷರಾದ ಮಂಜುನಾಥ್, ಶೇಖಣ್ಣ ಹಾಗೂ ಇತರರು ಇದ್ದರು.
January 14, 2025