ದಾವಣಗೆರೆ, ಫೆ.10 – ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ್ ಜಾರಕಿಹೊಳಿ ಅವರ ಪುತ್ರ – ರಾಜ್ಯ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ರಾಹುಲ್ ಸತೀಶ್ ಜಾರಕಿಹೊಳಿ ಅವರು ಇಂದಿಲ್ಲಿ ನಾಯಕ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ನಗರಸಭೆಯ ಮಾಜಿ ಅಧ್ಯಕ್ಷರೂ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರೂ ಆದ ಬಿ. ವೀರಣ್ಣ, ನಿಲಯದ ನಿರ್ದೇಶಕರುಗಳಾದ ಎನ್.ಎಂ ಆಂಜನೇಯ ಗುರೂಜಿ, ಗುಮ್ಮನೂರು ಶಂಬಣ್ಣ, ಶ್ರೀನಿವಾಸ ದಾಸಕರಿಯಪ್ಪ, ಶಾಮನೂರು ಡಿ.ಬಿ.ಪ್ರವೀಣ್, ಶ್ಯಾಗಲೆ ಕೆ.ಆರ್. ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಟಿ. ಸುಭಾಶ್‍ಚಂದ್ರ, ನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್, ಹೊಸಕೆರೆ ಸತೀಶ್, ಸಿರಾಜ್ ಶೇಕ್, ಪೈಲ್ವಾನ್ ಮಹೇಶಣ್ಣ, ರಘು ದೊಡ್ಮನೆ ದೊಡ್ಡಘಟ್ಟ, ಹೇಮಣ್ಣ ಅಣ್ಣಾಪುರ, ವಿಜಯಲಕ್ಷ್ಮಿ, ಆರ್ .ಬಸಣ್ಣ ಬಿ.ವಿ. ಪ್ರಮೋದ್ ಮತ್ತು ಇತರರು ಹಾಜರಿದ್ದರು.