ಮೈಲಾರ ಜಾತ್ರೆ : ನಿರ್ಬಂಧ

ಹೂವಿನಹಡಗಲಿ, ಫೆ.9 – ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜರು ಗುವ ಈ ಬಾರಿಯ ಜಾತ್ರಾ ಮಹೋತ್ಸವವನ್ನು  ಧಾರ್ಮಿಕ ವಿಧಿ ವಿಧಾನ ಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟು ಭಕ್ತರ  ಭಾಗವಹಿಸುವಿಕೆಯನ್ನು ನಿರ್ಬಂಧಿಸಲು ವಿಜಯನಗರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅರುಣ್ ಹೇಳಿದರು.

ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ವರೂ ಸರ್ಕಾರದ ಕ್ರಮವನ್ನು ಪಾಲಿಸಬೇಕು. ಅಲ್ಲದೇ ಕೊರೊನಾ ನಿಯಮಗಳನ್ನು ಅನುಸರಿಸಬೇಕು ಎಂದರು. ಜಿಲ್ಲಾಧಿಕಾರಿ ಮತ್ತು ಸರ್ಕಲ್ ಇನ್ಸ್ ಪೆಕ್ಟ  ರ್‌ಗಳಿಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಸಭೆಯ ಗಮನಕ್ಕೆ ತಂದ ಅವರು, ಸಹಾಯವಾಣಿಯನ್ನು ಜಾರಿ ಇಡಲಾಗುವುದು. ಅಗತ್ಯ ಬಿದ್ದಲ್ಲಿ  ಭಕ್ತರು 112 ಕ್ಕೆ ಕರೆ ಮಾಡಬಹುದು ಎಂದರು.

ಶಾಸಕ ಪಿ. ಟಿ. ಪರಮೇಶ್ವರ್ ನಾಯ್ಕ್ ಮಾತನಾಡುತ್ತಾ ಕಳೆದ ವರ್ಷದಂತೆ ಈ ವರ್ಷವೂ ಮೈಲಾರ ಜಾತ್ರೆಯನ್ನು ಸರ್ಕಾರ ನಿಷೇಧಿಸಿದೆ, ಆದರೆ ಸಂಪ್ರದಾಯ, ಪದ್ದತಿಯಂತೆ ಧಾರ್ಮಿಕ ವಿಧಿ, ವಿಧಾನಗಳು ಎಂದಿನಂತೆ ಜರುಗುತ್ತವೆ 

ಜಾತ್ರಾ ಸಮಯದಲ್ಲಿ ಮೈಲಾರದಲ್ಲಿ ನೈರ್ಮಲ್ಯೀಕರಣ, ರಸ್ತೆ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುವುದು. ಜಾತ್ರೆಯ ಮೊದಲು ಮತ್ತು ಜಾತ್ರೆಯ ನಂತರ ಮೈಲಾರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ, ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು

ಮೈಲಾರ ಗ್ರಾಮಸ್ಥರು ಹಣ್ಣು-ಕಾಯಿ, ಕುಂಕುಮ, ಬಳೆ, ವ್ಯಾಪಾರ ಮಾಡುತ್ತಿದ್ದರೆ ಅವರಿಗೆ ಯಾವುದೇ ರೀತಿ ತೊಂದರೆ ಕೊಡದಂತೆ ದೇವಸ್ಥಾನದ ಇ.ಒ. ಪ್ರಕಾಶ್ ರಾವ್ ಅವರಿಗೆ ಸೂಚಿಸಿದರು. 

ವಂಶಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಸಾನಿಧ್ಯ ವಹಿಸಿದ್ದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್ ಬಾಬು, ಸಹಾಯಕ ಆಯುಕ್ತ ಚಂದ್ರಶೇಖರಯ್ಯ ತಹಶೀಲ್ದಾರ್‌ ಮಹೇಂದ್ರ ಇಒ ಪ್ರಭು ರೆಡ್ಡಿ, ಮಾಜಿ ಶಾಸಕ ಎಸ್.ಎನ್. ಪಾಟೀಲ, ಪುರಸಭೆ  ಅಧ್ಯಕ್ಷ ವಾರದ ಗೌಸ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸನಗೌಡ, ಹಿರಿಯ ವಕೀಲ ಎಂ ಪರಮೇಶ್ವರಪ್ಪ, ಅಟವಾಳಿಗಿ ಕೊಟ್ರೇಶ್, ಗ್ರಾ.ಪಂ ಅಧ್ಯಕ್ಷೆ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದ ಇ.ಒ. ಎಂ.ಎಚ್ ಪ್ರಕಾಶ್‌ರಾವ್ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!