`ವಿಶ್ವ ಕ್ಯಾನ್ಸರ್ ಜಾಗೃತಿ ದಿನ’ಸಮಾರಂಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ
ಹೊನ್ನಾಳಿ,ಫೆ.9-ಕ್ಯಾನ್ಸರ್ ಕಾಯಿಲೆ ಬಂದ ತಕ್ಷಣ ಯಾರೂ ಹೆದರಬಾರದು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಗುಣಪ ಡಿಸಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಎಂ.ಎಚ್. ಗೀತಾ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಗಳ ಕಚೇರಿ, ಕತ್ತಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಹನುಮಸಾಗರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ `ವಿಶ್ವ ಕ್ಯಾನ್ಸರ್ ಜಾಗೃತಿ ದಿನ’ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಸೋಂಕಿನ ಅಬ್ಬರದ ನಡುವೆ ಬೇರೆ ಕಾಯಿಲೆಗಳ ಗಂಭೀರ ಪರಿಣಾಮದ ಬಗ್ಗೆ ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ. ಹಾಗಾಗಿ, ಇನ್ನು ಮುಂದಾದರೂ ಕೊರೊನಾ ಹೊರತಾಗಿ ಇತರೆ ಕಾಯಿಲೆಗಳ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ತಿಳಿಸಿದರು.
ಮನುಷ್ಯನ ದೇಹದಲ್ಲಿನ ಜೀವ ಕೋಶಗಳ ಅನಿಯಂತ್ರಿತ ಬೆಳವಣಿಗೆ, ಊತ, ಗಂಟುಗಳಿಂದ ಬರುವ ಕೀವು, ದೇಹದ ವಿವಿಧ ಭಾಗಗಳಿಂದ ರಕ್ತ ಸ್ರಾವ ಹೆಚ್ಚಾಗಿ ಕ್ಯಾನ್ಸರ್ ಕಾಯಿಲೆ ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಪ್ರಾರಂಭದ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸ ಬಹುದು ಎಂದು ವಿವರಿಸಿದರು.
ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್ ಮಾತನಾಡಿ, ಕ್ಯಾನ್ಸರ್ ಕಾಯಿಲೆ ಮನುಷ್ಯನ ದೇಹದ ಯಾವುದೇ ಭಾಗಕ್ಕಾದರೂ ಬರಬ ಹುದು. ಅದಕ್ಕೆ ವಯಸ್ಸಿನ ಮಿತಿ ಯಿಲ್ಲ. ರಾಸಾಯನಿಕಗಳ ಸೇವನೆ, ಹಾರ್ಮೋನ್ಗಳ ವೈಪರೀತ್ಯದಿಂದ ಹೆಚ್ಚಾಗಿ ಕ್ಯಾನ್ಸರ್ ಕಾಯಿಲೆ ಬರುತ್ತದೆ. ಆದ್ದರಿಂದ, ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿ ರಬೇಕು ಎಂದು ಹೇಳಿದರು.
ಶಾಲೆಯ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರೇಮಾ, ರುಕ್ಮಂಗಳ, ಚಾಮುಂಡಿ, ಚಂದ್ರಶೇಖರ್ ಇತರರು ಇದ್ದರು.