ನಗರದ ಗಾಜಿನ ಮನೆಯಲ್ಲಿ ಅಖಂಡ ಸೂರ್ಯ ನಮಸ್ಕಾರ

ದಾವಣಗೆರೆ, ಫೆ.8- ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಶ್ರೀ ಪತಂಜಲಿ ಯೋಗ ಫೌಂಡೇಷನ್ ಸಹಯೋಗದಲ್ಲಿ ನಗರದ ಗಾಜಿನ ಮನೆ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಆರೋಗ್ಯವಂತ ಸಮಾಜಕ್ಕಾಗಿ ಸೋಮವಾರ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಲಾಯಿತು.

435 ಯೋಗ ಪಟುಗಳು ಸೂರ್ಯ ನಮಸ್ಕಾರ ನಡೆಸಿಕೊಟ್ಟರು. ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಮಾತನಾಡಿ, ಇಷ್ಟೊಂದು ಯೋಗ ಪಟುಗಳಿಂದ ನಡೆಯುತ್ತಿರುವ ಸೂರ್ಯ ನಮಸ್ಕಾರ ಕಾರ್ಯಕ್ರಮದಿಂದಾಗಿ ಗಾಜಿನ ಮನೆ ಆವರಣದಲ್ಲಿ ಪಾಸಿಟಿವ್ ಎನರ್ಜಿ ಬರುವಂತಾಗಲಿ ಎಂದು ಆಶಿಸಿದರು.

ಫೌಂಡೇಷನ್ ಟ್ರಸ್ಟ್ ಕಾರ್ಯದರ್ಶಿ ಎಸ್.ಬಿ. ಜಯಪ್ರಕಾಶ್ ಮಾತನಾಡಿ, ಯೋಗದಿಂದ ಮಾನಸಿಕ ಶಾರೀರಿಕ ಆರೋಗ್ಯ ಪಡೆಯಬಹುದು ಎಂದರು.

ಧಾರವಾಡ ಕೃಷಿ ವಿವಿ ಸದಸ್ಯ ಎಲ್.ಎಸ್‌. ಅಜಗಣ್ಣನವರ್, ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ಯೋಗ ಮಾಡುವಂತೆ ಸಲಹೆ ನೀಡಿದರು.

ಮಹಿಳಾ ಸಂಚಾಲಕರಾದ ಮಂಜುಳಾ,     ಟಿ.ವಿ.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಹೆಚ್. ಕಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. 

ಟ್ರಸ್ಟ್‌ ಖಜಾಂಚಿ ಬಿ.ಸುರೇಶ್,
ಸಹ ಕಾರ್ಯದರ್ಶಿ ಎಂ.ಲೋಕೇಶ್ ಸೇರಿದಂತೆ ಹಿರಿಯ ಯೋಗ ಬಂಧುಗಳು ಪಾಲ್ಗೊಂಡಿದ್ದರು.

error: Content is protected !!