ಸೂರಿಲ್ಲದವರಿಗೆ ಸೂರು ಕಲ್ಪಿಸಲು ಕ್ರಮ

ದಾವಣಗೆರೆ, ಫೆ.6- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದ ಬಸಾಪುರ ಗ್ರಾಮದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಾಗರಿಕರ ಸಹಕಾರದಂತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಬಸಾಪುರ ಗ್ರಾಮದಲ್ಲಿ ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾ ಖೆಯ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂಬ ನಮ್ಮ ಆಶಯವನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

ಕ್ಷೇತ್ರದ ಬಸಾಪುರ ನಗರ ಪ್ರದೇಶದ ವ್ಯಾಪ್ತಿಗೆ ಇದ್ದರೂ ಸಹ ಗ್ರಾಮಾಂತರ ಪ್ರದೇಶದಂತೆ ಇದ್ದು, ಇಂದು ನಗರ ಪ್ರದೇಶದಂತೆ ಬೆಳೆದಿದೆ. ಈ ಭಾಗದ ಮುಖಂಡರು, ನಾಗರಿಕರು ತಮ್ಮ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ನಮಗೆ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು. 

ಮಹಾನಗರ ಪಾಲಿಕೆ ಮಾಜಿ ಸದಸ್ಯ  ಬಾ.ಮ. ಬಸವರಾಜಯ್ಯ, ಎಂ.ಎಸ್. ಕೊಟ್ರಯ್ಯ, ಎಸ್. ಸುರೇಂದ್ರಪ್ಪ ಮತ್ತಿತರರು ಮಾತನಾಡಿದರು.

ಪಾಲಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಕೊಟ್ರಯ್ಯ, ಮುಖಂಡರುಗಳಾದ ಸಿ.ಮಹೇಶ್ವರಪ್ಪ, ಕೆ.ಎಲ್.ಹರೀಶ್, ನಾಗೇಂದ್ರಚಾರ್, ಟಿ.ಹೆಚ್.ರೇವಣಸಿದ್ದಪ್ಪ, ಕಳೂರು ಮಹೇಶ್ವರಪ್ಪ, ಕೆ.ಬಿ.ಲಿಂಗರಾಜ್, ಕೆ.ಬಿ.ಪ್ರಕಾಶ್, ಶಿವಕುಮಾರ್, ಬಿ.ಟಿ.ಮರುಳಸಿದ್ದಪ್ಪ, ಎನ್.ಎಂ. ಕೊಟ್ರಯ್ಯ, ವಾಮದೇವಯ್ಯ, ಪಂಚಾಕ್ಷರಯ್ಯ, ಅಕ್ಕಿ ರಾಜು, ಗಿರೀಶ್, ನಿಂಗಪ್ಪ, ವೀರೇಶ್, ತಿಪ್ಪೇಶ್, ಹನುಮಂತಪ್ಪ ಅಣ್ಣಾನಗರದ ದುಗ್ಗೇಶ್, ಎಲ್. ವೀರೇಶ್, ಆನೆಕೊಂಡ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!