ಆರೋಗ್ಯಕರ ಸಮಾಜಕ್ಕಾಗಿ ಅಖಂಡ ಸೂರ್ಯ ನಮಸ್ಕಾರ

ದಾವಣಗೆರೆ, ಫೆ.6- ಆರೋಗ್ಯಕರ, ಸದೃಢ ಸಮಾಜ ಮತ್ತು ಲೋಕ ಕಲ್ಯಾಣಾರ್ಥವಾಗಿ ರಥಸಪ್ತಮಿ ಪ್ರಯುಕ್ತ ನಗರದ ಪತಂಜಲಿ ಯೋಗ ಫೌಂಡೇಷನ್ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಭಾನುವಾರ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾನಗರದ ವಿನಾಯಕ ಬಡಾವಣೆಯ ವರಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಇಂದು ನಿರಂತರವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕ ಟಿ.ವಿ.ಸತ್ಯನಾರಾಯಣ ಮತ್ತು ಜಯಪ್ರಕಾಶ್ ಅವರು ಜಾತಿ- ಧರ್ಮ, ಮೇಲು-ಕೀಳು, ಬಡವ-ಬಲ್ಲಿದ ಎಂಬಿತ್ಯಾದಿ ಭೇದಗಳಿಲ್ಲದೆ ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯಕ್ರಮ ನಡೆಯಿತು.  

error: Content is protected !!