ಹರಿಹರ, ಫೆ. 4 – ಕುಂದಾಪುರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿಗೆ ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಮತ್ತು ಗೇಟ್ನಲ್ಲಿ ತಡೆದು ಪ್ರವೇಶ ನಿರಾಕರಿಸಿದ ಶಿಕ್ಷಕರನ್ನು ವಜಾ ಮಾಡಬೇಕು ಎಂದು ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮತ್ತು ದಾದಾ ಖಲಂದರ್ ಒತ್ತಾಯಿಸಿದ್ದಾರೆ.
ನಗರದ ಮಹಾತ್ಮ ಗಾಂಧಿ ಕೊಳಚೆ ಪ್ರದೇಶದ ಮುಂಭಾಗದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು. 26 ವಿದ್ಯಾರ್ಥಿನಿಯರು ಹಿಜಬ್ ಧರಿಸಿ, ಕಾಲೇಜಿಗೆ ಬಂದಾಗ ಅವರನ್ನು ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣರು ಗೇಟ್ನಲ್ಲಿ ತಡೆದು ಹಿಜಬ್ ಧರಿಸಿ ಕಾಲೇಜಿನೊಳಗೆ ಬರುವಂತಿಲ್ಲ ಎಂದು ಹೇಳಿರುವುದು ಖಂಡಿನೀಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎ.ಆರ್. ಮನ್ಸೂರು, ಜಾಕೀರ್ ಹುಸೇನ್, ಮೊಹಮದ್ ಅಲಿ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.