ಅಭಿವೃದ್ಧಿಗೆ ವೇಗ ನೀಡುವ ಬಜೆಟ್

ಅಭಿವೃದ್ಧಿಗೆ ವೇಗ ನೀಡುವ ಬಜೆಟ್ - Janathavaniದಾವಣಗೆರೆ, ಫೆ.1- ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲೂ ಕೂಡ ಅಭಿವೃದ್ದಿಗೆ ವೇಗ ನೀಡುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ ಅವರು ಮಂಡಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ರೈತರ ಆದಾಯ ದ್ವಿಗುಣಗೊಳಿಸಬೇಕೆನ್ನುವ ಮಾತಿಗೆ ಪೂರಕವಾಗಿ ಕನಿಷ್ಟ ಬೆಂಬಲ ಬೆಲೆಗಾಗಿ 2.75 ಲಕ್ಷ ಕೋಟಿ ಮೀಸಲಿಟ್ಟಿರುವುದು ಶ್ಲಾಘನೀಯ.  25 ಸಾವಿರ ಕಿ.ಮೀ ಹೆದ್ದಾರಿ ನಿರ್ಮಾಣ, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಗೆ ಪೂರಕವಾಗಿ ಕಾರ್ಗೋ ಟರ್ಮಿನಲ್‍ಗಳ ನಿರ್ಮಾಣ. ಮಹಾತ್ವಾಕಾಂಕ್ಷೆಯ ನದಿ ಜೋಡಣೆಯಂತಹ ಯೋಜನೆಗಳು ಗಮನ ಸೆಳೆಯುತ್ತವೆ. ಒಟ್ಟಾರೆಯಾಗಿ ಇದೊಂದು ಅಭಿವೃದ್ದಿಗೆ ವೇಗ ನೀಡುವ ವೇಗವರ್ಧಕ ಬಜೆಟ್ ಇದಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!