ಜಗಳೂರು ವಿದ್ಯಾರ್ಥಿ ನಿಲಯಕ್ಕೆ ಅಧಿಕಾರಿಗಳ ಅನಿರೀಕ್ಷಿತ ಭೇಟಿ

ವಿದ್ಯಾರ್ಥಿನಿಯರ ಯೋಗಕ್ಷೇಮ,  ಕಾರ್ಯಚಟುವಟಿಕೆ ಪರಿಶೀಲನೆ

ಜಗಳೂರು, ಜ.30- ತಾಲ್ಲೂಕಿನ ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಸ್.ಟಿ. ಮಹಿಳಾ ವಿದ್ಯಾರ್ಥಿ ನಿಲಯಕ್ಕೆ  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮತ್ತು  ಜಿಲ್ಲಾ ಉಪನಿರ್ದೇಶಕರ ಕಚೇರಿ ಅಧೀಕ್ಷಕಿ ಗೀತಾ, ತನಿಖಾಧಿಕಾರಿ ನಾಗರತ್ನ ಅವರು  ಭೇಟಿ ನೀಡಿ, ಮಕ್ಕಳ ಯೋಗ ಕ್ಷೇಮ ಮತ್ತು ಅವರ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಕೋವಿಡ್-19 ಪಟ್ಟಣದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ನಿಲಯಗಳಿಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವೀಕ್ಷಣೆ ಮಾಡಲಾಗಿದೆ. ನಿಲಯದಲ್ಲಿರುವ ಮಕ್ಕಳು ಮೊಬೈಲ್ ಗಳನ್ನು ಬಳಸದೇ ಚೆನ್ನಾಗಿ  ಪಠ್ಯ ಪುಸ್ತಕಗಳನ್ನು ಓದಿ, ಮುಂದೆ ಬರುವ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕು ಎಂದು ಸಲಹೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಬರುವ ಎಸ್ಸಿ, ಎಸ್ಟಿ ಮಕ್ಕಳಿಗೆ ಕೊಡುವ ವಿದ್ಯಾರ್ಥಿ ವೇತನ ಮತ್ತು ಪ್ರಥಮ ಶ್ರೇಣಿಯಲ್ಲಿ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಓದಲು ಸರ್ಕಾರ ಉಚಿತವಾಗಿ ಸ್ಕಾಲರ್ ಶಿಪ್. ನೋಟ್ ಬುಕ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತದೆ ಎಂದರು.

  ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರು, ಟೀ, ಬಿಸ್ಕೀಟ್, ಮೊಟ್ಟೆ, ಬಾಳೆಹಣ್ಣನ್ನು ಮತ್ತು ಊಟ, ತಿಂಡಿಗಳನ್ನು ಸರ್ಕಾರದ ಮೇನು ಚಾರ್ಟ್ ಪ್ರಕಾರ ಕೊಡಬೇಕು ಮತ್ತು ಕೋವಿಡ್ 19 ಪಟ್ಟಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೈಗೆ ಸ್ಯಾನಿಟೈಜರ್. ಮಾಸ್ಕ್. ಸಾಮಾಜಿಕ ಅಂತರ ಕಾಯ್ದುಕೊಂಡು ಇರಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿ ಅಧೀಕ್ಷಕಿ ಗೀತಾ.  ತನಿಖಾ ಸಹಾಯಕರಾದ ನಾಗರತ್ನ ಮತ್ತು ನಿಲಯ ಮೇಲ್ವಿಚಾರಕರಾದ ಮಂಗಳ, ಅಡುಗೆ ಸಿಬ್ಬಂದಿಗಳಾದ ಸರೋಜಮ್ಮ. ನಾಗರತ್ನಮ್ಮ, ಸುಶೀಲಮ್ಮ ಲಕ್ಷ್ಮಮ್ಮ. ಕರಿಬಸಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!