ಘನತ್ಯಾಜ್ಯವನ್ನು ವೈಜ್ಞಾನಿಕ ನಿರ್ವಹಣೆ ಮಾಡದಿದ್ದರೆ ಪರಿಸರಕ್ಕೆ ಹಾನಿ

ಜಗಳೂರಿನ ನ್ಯಾಯಾಧೀಶರಾದ ಜಿ. ತಿಮ್ಮಯ್ಯ ಕಳಕಳಿ

ಜಗಳೂರು, ಜ.30-  ಘನತ್ಯಾಜ್ಯವನ್ನು ವೈಜ್ಞಾನಿಕ ನಿರ್ವಹಣೆ ಮಾಡದಿದ್ದರೆ ಪರಿಸರಕ್ಕೆ ಹಾನಿಯಾಗಲಿದೆ. ಎಂದು ಜೆ.ಎಂ.ಎಪ್.ಸಿ. ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಜಿ. ತಿಮ್ಮಯ್ಯ ಅವರು ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸದ್ಭವನಾ ದಿನ ಮತ್ತು ಸ್ಚಚ್ಛತಾ  ದಿನಾಚರಣೆ ಪ್ರಯುಕ್ತ ಪಟ್ಟಣ ಪಂಚಾಯಿತಿ ಹಾಗೂ ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ  ಸ್ವಚ್ಛತಾ ಕಾರ್ಯಕ್ರಮ, ಹಾಗೂ ಕಸ ನಿರ್ವಹಣೆಯ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು  ಮಾತನಾಡಿದರು.

ಪಟ್ಟಣದ ನಾಗರೀಕರು ಬಳಸಿದ ಪ್ಲಾಸ್ಟಿಕ್ ಸೇರಿದಂತೆ ಅನೇಕ ತ್ಯಾಜ್ಯ ವಸ್ತುಗಳಿಂದ ಪರಿಸರದ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.  ನಾಗರೀಕರು ಸಹ ತಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಿಕೊಳ್ಳುವುದು ಹಾಗೂ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣ ಕಸ ವಿಂಗಡಿಸಿ ಪಟ್ಟಣ ಪಂಚಾಯಿತಿ ವಾಹನಕ್ಕೆ ನೀಡುವಂತೆ ಕರೆ ನೀಡಿದರು.

ಸಾಧ್ಯವಾದಷ್ಟು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವುದು ಹಾಗೂ  ತ್ಯಾಜ್ಯ ವಸ್ತುಗಳನ್ನು  ಮರು ಬಳಕೆ ಮಾಡುವ ಮೂಲಕ  ವೈಜ್ಞಾನಿಕ ನಿರ್ವಹಣೆ ಮಾಡುವುದು. ಅವಶ್ಯಕತೆ ಇರುತ್ತದೆ. 

ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016 ಮತ್ತು ಹಸಿರು ನ್ಯಾಯ ಪೀಠ ಆದೇಶದಂತೆ  ಕಸ ವಿಂಗಡಣೆ ಮಾಡುವುದು, ಉತ್ಪಾದಕರಿಗೆ ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಹಾಕುವುದು ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಸುವುದು ಅಪರಾಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರು ಕಿಫಾಯತ್ ಅಹ ಮದ್, ನ್ಯಾಯಾಲಯದ ಸಿಬ್ಬಂದಿ ವರ್ಗದ ವರು, ಪೌರ ಕಾರ್ಮಿಕರು ಹಾಜರಿದ್ದರು.

error: Content is protected !!