ಯುವ ಪೀಳಿಗೆಗೆ ದೇಶದ ಕಾನೂನಿನ ಅರಿವು ಅಗತ್ಯ

ರಾಣೇಬೆನ್ನೂರಿನ ಬಿಎಜೆಎಸ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ

 ರಾಣೇಬೆನ್ನೂರು,ಜ.28- ಇಂದಿನ ಯುವ ಪೀಳಿಗೆ ದೇಶದ ಕಾನೂನಿನ ಬಗ್ಗೆ ಅರಿವು ಹೊಂದಬೇಕು, ಸಂವಿಧಾನದ ಬಗ್ಗೆಯೂ ವಿದ್ಯಾರ್ಥಿಗಳು ಅರಿತು ಅದನ್ನು ಪರಿಪಾಲಿಸಬೇಕು ಎಂದು ಬಿಎಜೆಎಸ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಹಾಗೂ ಮಾಜಿ ಸಚಿವ ರುದ್ರಪ್ಪ ಲಮಾಣಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಂವಿಧಾನದ ಸಮಗ್ರತೆಯನ್ನು ಎತ್ತಿಹಿಡಿಯುವ ಮೂಲಕ ಈ ದಿನವನ್ನು ಗಣರಾಜೋತ್ಸವ ದಿನ ಎಂದು ಆಚರಿಸಲಾಗುತ್ತದೆ ಎಂದು ನಗರದ ಬಿಎಜೆಎಸ್‍ಎಸ್    ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 73ನೇ ಗಣರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.    

ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಂಜು ಬುರುಕುತನ ವಾಗಲಿ ಅಥವಾ ಹೇಡಿತನಗಳಿ ದ್ದಿದ್ದರೆ ಈ ದೇಶಕ್ಕೆ ಎಂದೂ ಸ್ವಾತಂತ್ರ್ಯ ದೊರೆಯು ತ್ತಿರಲಿಲ್ಲ, ಅಂದು ಜಾಗೃತ ಹೋರಾಟಗಾರರು ಮಾಡಿದ ಹೋರಾಟದ ಫಲವಾಗಿ ಇಂದು ನಾವೆಲ್ಲರೂ ಶಾಂತಿ, ಸುವ್ಯವಸ್ಥೆಯಿಂದ ಬಾಳಲು ಸಾಧ್ಯವಾಗಿದೆ ಎಂದು ಬಿಎಜೆಎಸ್‍ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಂ. ಕುಬೇರಪ್ಪ ನುಡಿದರು.

ಸ್ವಾತಂತ್ರ್ಯ ಹೇಗೆ ಸಿಕ್ಕಿತ್ತು ಎಂಬುದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಗ ದೇಶದ ಮೇಲೆ ನಂಬಿಕೆ, ಅಭಿಮಾನ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೇ ಇಂದು ಯುವ ಪೀಳಿಗೆ ನೈತಿಕ ಜಾಗೃತಿಗಾಗಿ ಹೋರಾಟ ಮಾಡಬೇಕಾಗಿದೆ ಎಂದು  ಕುಬೇರಪ್ಪ ಕರೆ ನೀಡಿದರು. 

ಅಧ್ಯಕ್ಷತೆಯನ್ನು ಪ್ರಾಚಾರ್ಯ ಸುರೇಶ್ ಬಣಕಾರ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಗೋಪಾಲ ರೆಡ್ಡಿ, ಪ್ರಕಾಶ ಬಸಪ್ಪ ನವರ, ಎಂ.ಮೃತ್ಯುಂಜಯ. ಹೆಚ್.ಪಟ್ಟಣಶೆಟ್ಟಿ. ಕೆ.ಕೆ.ಹಾವಿನಾಳ ಮತ್ತಿತರರು ಭಾಗವಹಿಸಿದ್ದರು.   ಸ್ವಾಗತ-ಡಾ.ಕಾಂತೇಶ ರೆಡ್ಡಿ, ನಿರೂಪಣೆ- ಸುನೀಲ್ ಹಿರೇಮಣಿ, ವಂದನಾರ್ಪಣೆ ಬಸವರಾಜ ಮಳೇನಹಳ್ಳಿ ಮಾಡಿದರು. 

error: Content is protected !!