ರಚನಾ ಕ್ರೀಡಾಂಗಣದ ಅಭಿವೃದ್ಧಿಗೆ ಸಹಕಾರ

ಶೆಟಲ್ ಬ್ಯಾಡ್ಮಿಂಟನ್ ಉಡನ್ ಕೋರ್ಟ್‌  ಉದ್ಘಾಟಿಸಿದ ಶಾಸಕ ರಾಮಪ್ಪ

ಹರಿಹರ, ಜ. 27- ಹಿರಿಯ ಪತ್ರಕರ್ತ ರಾಗಿದ್ದ ಜಿ. ಸುರೇಶ್ ಗೌಡ ಅವರ ಆಶಯದಂತೆ ರಚನಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಬೇಕಾದ ಸಹಕಾರ ನೀಡುವುದಾಗಿ ಶಾಸಕ ಎಸ್. ರಾಮಪ್ಪ ಭರವಸೆ ನೀಡಿದ್ದಾರೆ.

ನಗರದ ರಚನಾ ಕ್ರೀಡಾಂಗಣದ ಮೇಲ್ಮಹಡಿಯಲ್ಲಿ ನೂತನವಾಗಿ ಸುಮಾರು ಎಂಟು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಶೆಟಲ್ ಬ್ಯಾಡ್ಮಿಂಟನ್ ಉಡನ್  ಕೋರ್ಟ್‌ ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಗರದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕೆಂಬುದು ಸುರೇಶ್ ಗೌಡರ ಕನಸಾಗಿತ್ತು. ಅವರು ಹಗಲಿರುಳೆನ್ನದೇ ಈ ಕ್ರೀಡಾ ಸಂಸ್ಥೆಯನ್ನು ಕಟ್ಟಲು ಶ್ರಮಿಸಿದ್ದರು. ಅವರ ಅಗಲಿಕೆ ನಂತರವೂ ಇಲ್ಲಿ ಪ್ರಗತಿ ಕಾರ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಈ ಸಂಸ್ಥೆಯ ಅಭಿವೃದ್ಧಿಗೆ 5 ಲಕ್ಷ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದ್ದೆ. ಆದರೆ, ಕೊರೊನಾ ಕಾರಣದಿಂದ ಅನುದಾನ ಕೊಡಲು ಸಾಧ್ಯವಾಗಿರಲಿಲ್ಲ. ಇನ್ನು  ಮೂರು ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದರು.

ಕ್ರೀಡಾ  ಸಂಸ್ಥೆಯ ಅಧ್ಯಕ್ಷ ಗಿರೀಶ್ ಹೆಗ್ಗಪ್ಪ ಮಾತನಾಡಿ,  ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಸಹಕಾರ ನೀಡಬೇಕೆಂದು ಕೋರಿದರು.

ಉಪಾಧ್ಯಕ್ಷ ಆರ್.ಟಿ. ಚಂದ್ರಕಾಂತ್ ಮಾತ ನಾಡಿ, ಒಂದೇ ಸೂರಿನಲ್ಲಿ ಹಲವು ಕ್ರೀಡೆಗಳ ತರ ಬೇತಿ  ಹಾಗೂ ಸ್ಪರ್ಧೆಗಳ ಆಯೋಜನೆ ಸೇರಿ ದಂತೆ ಹಲವು ಕಾರ್ಯಗಳು ಬಾಕಿ ಇವೆ. ಈಗ 8 ಲಕ್ಷ ರೂ. ವೆಚ್ಚದಲ್ಲಿ ಎರಡು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣವಾಗಿರುವುದು ಕ್ರೀಡೆಗೆ ಅನುಕೂಲ ಎಂದರು.

ಕಾರ್ಯದರ್ಶಿ ಪಂಚಾ ಕ್ಷರಿ, ನಿರ್ದೇಶಕರಾದ ಎಸ್.ಎಂ. ಪ್ರಕಾಶ್, ಅಜಿತ್ ಸಾವಂತ್, ಕೆ.ಎಸ್. ಸುಧಾಕರ್, ಹೆಚ್‌.ಎಂ. ನಾಗರಾಜ್. ಶ್ರೀಧರ್‌ ಶೆಟ್ಟಿ ಹಮ್ಮಿಗಿ, ಪ್ರಶಾಂತ ರಾಯ್ಕರ್, ಪರಶುರಾಮ ಕಾಟ್ವೆ, ಮುರುಗೇಶ್, ಸದಸ್ಯರಾದ ಅನಿಲ್, ಉಮೇಶ್, ಶಿವಯೋಗಿ, ಸಂತೋಷ್, ಕೃಷ್ಣ, ರವೀಂದ್ರ ಸಿಂಗ್, ನಾಗರಾಜ್, ಲೋಕೇಶ್, ಅಶೋಕ್, ಮೌನೇಶ್, ಮಧು, ಈಶ್ವರ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.

error: Content is protected !!