ಬಸವ ಪ್ರಭು ಶ್ರೀ ವ್ಯಾಕುಲತೆ
ದಾವಣಗೆರೆ, ಜ. 27- ಸಂವಿಧಾನ ಜಾರಿಗೆ ಬಂದು 73 ವರ್ಷಗಳು ತುಂಬಿದವು. ಆದರೆ ಜನಸಾಮಾನ್ಯರ ಬದುಕು ಮಾತ್ರ ಪ್ರಗತಿಯಾಗಿಲ್ಲ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದಿಸಿದ್ದಾರೆ.
ನಗರದ ವಿರಕ್ತ ಮಠದಲ್ಲಿ ಡಾ. ಶಿಮುಶ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಎಸ್ಜೆಎಂ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು. ರಾಷ್ಟ್ರದ ಧರ್ಮಗ್ರಂಥ ಸಂವಿಧಾನವಾಗಿದೆ. ಸಂವಿಧಾನದ ತತ್ವಗಳು ನಮ್ಮ ಬದುಕಿನ ವಿಧಾನಗಳಾಗಬೇಕು. ಸರ್ವರಿಗೂ ಸಮಪಾಲು ಸಿಗಬೇಕು. ಅದಕ್ಕಾಗಿ ಎಲ್ಲರೂ ಒಪ್ಪುವಂತೆ ಬದುಕನ್ನು ಕಂಡುಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಕೆಲಸ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ್, ಕುಮಾರಸ್ವಾಮಿ, ಮುಖ್ಯ ಶಿಕ್ಷಕರಾದ ರೋಷನ್ ಮತ್ತು ಇತರರು ಉಪಸ್ಥಿತರಿದ್ದರು.