ದಲಿತ ಮಹಿಳೆ ಕೊಲೆ: ಸಿಬಿಐ ತನಿಖೆಗೆ ಆಗ್ರಹ

ಜಗಳೂರು, ಜ.24- ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ದಲಿತ ಮಹಿಳೆ ರೇಖಾ ಕೊಲೆಯನ್ನು ಸಿ.ಬಿ.ಐ ತನಿಖೆ ಒಪ್ಪಿಸಿ, ಉಳಿದ ಆರೋಪಿಯನ್ನು ಪತ್ತೆ ಹಚ್ಚಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಜಗಳೂರು ತಾಲ್ಲೂಕು ಬಣದ  ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ದಲಿತ ಮುಖಂಡರಾದ  ಶಂಭುಲಿಂಗಪ್ಪ, ಗುರುಸಿದ್ದಾಪುರ  ಗ್ರಾಮದ  ದಲಿತ ಸಮುದಾಯಕ್ಕೆ  ಸೇರಿದ ಮಹಿಳೆ  ರೇಖಾ ಅವರು  ಗ್ರಾಮದ ತೊಗರಿ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದು ಯಾರೋ ದುಷ್ಕರ್ಮಿ ಗಳು ಸದರಿ ರೇಖಾ ಇವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ರೇಖಾಳ ಸಂಬಂಧಿಗಳು ಜಗಳೂರು ತಾಲ್ಲೂಕು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. 

ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಮಾತನಾಡಿ, ರೇಖಾ ಇವರಿಗೆ ಸುಮಾರು ನಾಲ್ಕು ವರ್ಷದ  ಮಗಳಿದ್ದು ಈ ಬಾಲಕಿಗೆ  ಸರ್ಕಾರದಿಂದ ಹತ್ತು ಲಕ್ಷ ಪರಿಹಾರ ನೀಡಬೇಕು. ಈ ಕೊಲೆ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ  ಎಂದು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಂಚಾಲಕ ಬೇತೂರು ಹನುಮಂತ, ಜಿಗಳಿ ಹಾಲೇಶ್, ಪರಮೇಶ್, ಲಿಂಗರಾಜ್, ದುರ್ಗಾ ಪ್ರಸಾದ್, ತಾಲ್ಲೂಕು ಸಂಚಾಲಕರಾದ ಮಲ್ಲೇಶ್ ಪಿ.ವೈ.ಬಾಬು ರಾಜೇಂದ್ರ ಪ್ರಸಾದ್, ಸಿದ್ದನಹಳ್ಳಿ ವೆಂಕಟೇಶ್, ಮಾಜಿ ಗ್ರಾ. ಪಂ. ಸದಸ್ಯ ಹೊನ್ನೂರಪ್ಪ.ತಾಲೂಕು ಸಂಘಟನೆ 

ಸದಸ್ಯರಾದ ಶಿವಪ್ಪ, ನಾಗರಾಜ, ಮಾಂತೇಶ್ ಸೂರಗೊಂಡನಹಳ್ಳಿ  ಕುಬೇಂದ್ರಪ್ಪ ಶಿವಮೂರ್ತಿ, ದೊಣ್ಣೆಹಳ್ಳಿ ಏಕಾಂತಪ್ಪ, ದುರ್ಗೇಶ್, ಪ್ರಕಾಶ್, ಕೊಟ್ರೇಶ್, ಗೌರಿಪುರ ಸತ್ಯಮೂರ್ತಿ, ಪಂಚಾಕ್ಷರಿ ದೇವರಾಜ್, ಚೌಡಮ್ಮ, ಸಾಕಮ್ಮ,  ಜಯಮ್ಮ, ಆಶಾ, ಸೇರಿದಂತೆ ಮಡ್ರಳ್ಳಿ ಗ್ರಾಮಸ್ಥರು ಸಂದರ್ಭದಲ್ಲಿ ಹಾಜರಿದ್ದರು.

error: Content is protected !!