ದಲ್ಲಾಳಿಗಳ ಕುತಂತ್ರವೇ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕಾರಣ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ  ಬಾಗಳಿ ಎನ್. ಕೊಟ್ರೇಶಪ್ಪ

ಹರಪನಹಳ್ಳಿ,ಜ.24-  ದಲ್ಲಾಳಿಗಳ ಕುತಂತ್ರವೇ ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲು ಕಾರಣ ಎಂದು ವಿಜಯನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ  ಬಾಗಳಿ ಎನ್. ಕೊಟ್ರೇಶಪ್ಪ   ಆರೋಪಿಸಿದರು.

ಪಟ್ಟಣದ ಬಾಬು ಜಗಜೀವನ್ ರಾಮ್ ಭವನದಲ್ಲಿ ರೈತ ಮೋರ್ಚಾ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಪರಿಚಯಾತ್ಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರ ಅನುಕೂಲಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು, ಆ ಕೃಷಿ ಕಾಯ್ದೆಗಳು ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲವಾಗುತ್ತಿದ್ದವು, ದೇಶದ ಯಾವುದೇ ಭಾಗದಲ್ಲಿ ತಾವು ಬೆಳೆದ ದವಸ, ಧಾನ್ಯಗಳನ್ನು ರೈತರು ಮಾರಾಟ ಮಾಡಬಹುದಿತ್ತು, ಜೊತೆಗೆ ತಾವು ಇದ್ದಲ್ಲಿಯೇ ವ್ಯಾಪಾರ, ವ್ಯವಹಾರಗಳನ್ನು ನಡೆಸುವಂತಹ ಎಲ್ಲಾ ಅಂಶಗಳು ಆ ಕಾಯ್ದೆಯಲ್ಲಿದ್ದವು, ಆದರೆ ವಿರೋಧ ಪಕ್ಷಗಳು ಮತ್ತು ದಲ್ಲಾಳರು ಅಡ್ಡಿಯಾದರು ಎಂದು ದೂರಿದರು.

ಜಿಲ್ಲಾ ಬಿಜೆಪಿ  ಎಸ್.ಟಿ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿದ್ದು, ಜನಸಾಮಾನ್ಯರ ಪಕ್ಷ ಬಿಜೆಪಿ ಪಕ್ಷವಾಗಿದ್ದು ಇಂದು ಚಹಾ ಮಾರುವ ವ್ಯಕ್ತಿ ಪ್ರಧಾನಿ ಯಾಗಿದ್ದಾರೆ ಎಂದರೆ ಅದು ಬಿಜೆಪಿಯಿಂದ ಮಾತ್ರ ಎಂದರು.

ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪೂಜಪ್ಪ ಮಾತನಾಡಿ, ರಾಜಕೀಯ ಪಕ್ಷಗಳಲ್ಲಿಯೇ ಬಿಜೆಪಿ ವಿಭಿನ್ನ ಪಕ್ಷವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಆಂತರಿಕ ಪ್ರಜಾಪ್ರಭುತ್ವ ವಿರುವ ಪಕ್ಷ ಎಂದು ಹೇಳಿದರು.

ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಷಣ್ಮುಖಪ್ಪ ಗುರಿಕಾರ ಮಾತನಾಡಿದರು. ಬಿಜೆಪಿ ವಿಜಯನಗರ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರ್ಯಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ರಮೇಶ್ ಕುಮಾರ್, ಹರಪನಹಳ್ಳಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಪೂಜಾರ, ಜಿಲ್ಲಾ ಕಾರ್ಯದರ್ಶಿ  ಬಿ.ವೈ.ವೆಂಕಟೇಶ, ಪುರಸಭೆ ಸದಸ್ಯರುಗಳಾದ ಎಂ.ಕೆ.ಜಾವೀದ್, ಗೌಳಿ ವಿನಯ್, ಮುಖಂಡರಾದ ಗೋಣಿಗೌಡರು, ಚೆನ್ನೇನಗೌಡ್ರು, ಚಿದಾನಂದ ಸೂಗೂರು, ನಾಗರಾಜ ಬಳಿಗಾನೂರು, ತಳಕಲ್ ರವಿ, ರೇಖಾ, ಲತಾ ನಾಗರಾಜ ತಿರುಮಲ, ಅಶೋಕ ಬಾಬು ರಾವ್ ಇತರರು ಹಾಜರಿದ್ದರು.

error: Content is protected !!