ಹರಿಹರ, ಜ. 23 – ಇಲ್ಲಿನ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿರುವ ಪುಣ್ಯಕೋಟಿ ಮಠದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯೊಂದಿಗೆ ಧನ್ಯೋಸ್ಮೀ ಭರತ ಭೂಮಿ ಸದಸ್ಯ ಹರೀಶ್ ಹಾಗೂ ಗೀತಾ ಅವರ ಮದುವೆ ನೆರವೇರಿತು.
ಧನ್ಯೋಸ್ಮೀ ಭರತಭೂಮಿ ಅಧ್ಯಕ್ಷ ಚರಣ್ ಅಂಗಡಿ ಮಾತನಾಡಿ, ಸುಭಾಷ್ ಚಂದ್ರ ಬೋಸ್ ರ 125ನೇ ಜನ್ಮ ದಿನಾಚರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ತಂಡದ ಸದಸ್ಯರಾದ ಹರೀಶ್ ಹಾಗೂ ಗೀತಾರವರ ಮದುವೆ ರಾಷ್ಟ್ರ ಪ್ರೇಮ ಹಾಗೂ ದೇಶ ಭಕ್ತಿಯ ಸಂದೇಶ ನೀಡಲಿ ಎಂದರು.
ಸಂಘದ ಗೌರವಾಧ್ಯಕ್ಷ ಡಾ|| ಜಿ. ಜೆ. ಮೆಹೆಂದಳೆ ಮತ್ತು ಪತ್ನಿ ಶಕುಂತಲಾ ಮೆಹೆಂದಳೆ, ಸಾತ್ವಿಕ್ ಮೆಹೆಂದಳೆ, ಕೋಡಿಯಾಲ ಪಂಚಾಯ್ತಿ ಅಧ್ಯಕ್ಷ ಚೇತನ ಪೂಜಾರ್, ತಂಡದ ವಾಗ್ಮಿ ಗುರುಪ್ರಸಾದ್ ಆನ್ವೇರಿ, ವಿಜಯ ಉದಗಟ್ಟಿ, ಮಿಥುನ ಕಟವಟೆ, ಆರ್. ಆರ್. ಹರೀಶ, ಬಿ. ಸಿ. ಮಧು, ಕೆ. ಬಿ. ವಿಜಯ, ಗೋಣಿಬಸಪ್ಪ, ನಾಗರಾಜ ಕುಂಬಾರ್, ಸಿಗ್ಬತ್ ಉಲ್ಲಾ, ಶ್ಯಾಮ್, ಎಲ್ಲಪ್ಪ, ಸಿದ್ದು ಕುಂಬಾರ್, ಎಂ. ಕೆ. ಗಣೇಶ, ಎಂ.ಎನ್. ಮಲ್ಲೇಶಪ್ಪ, ಛಾಯಾಗ್ರಾಹಕ ಸಿದ್ದಾರ್ಥ ಯಡಿಯಾಪುರ ಉಪಸ್ಥಿತರಿದ್ದರು.