ದಾವಣಗೆರೆ, ಜ.23- ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾಸಭಾದ ಯುವ ಕಾರ್ಯಕಾರಿಣಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕೊಟ್ರೇಶ್, ಟಿಂಕರ್ ಮಂಜಣ್ಣ, ಕರೆಶಿವಪ್ಳರ ಸಿದ್ದೇಶ್, ಜಯಪ್ರಕಾಶ್ ಮಾಗಿ, ಕೊರಟಕೆರೆ ಶಿವಕುಮಾರ್, ಮೈಸೂರು ಮಠ ಮುಪ್ಪಯ್ಯ, ದ್ರಾಕ್ಷಿಯಣಿ ಅಂದಾನಪ್ಪ, ನಾಗಮಣಿ ಹಂಪಾಳಿ, ಶಶಿಕಲಾ ಬಡಿದಾಳ್, ಕೆ.ಇ. ಮಂಜುಳಾ, ರೇಖಾ ವಾಲಿ, ರುದ್ರಮ್ಮ ಇದ್ದರು.