ಈಗಲೂ ಎರಡನೇ ದರ್ಜೆಯಲ್ಲೇ ಮಹಿಳೆ

ಕಸ್ತೂರಿಬಾ ಸಮಾಜದ ವಾರ್ಷಿಕೋತ್ಸವದಲ್ಲಿ ಪ್ರೊ. ಅನಿತ ದೊಡ್ಡಗೌಡರ್ ವಿಷಾದ

ದಾವಣಗೆರೆ, ಜ. 21 – ಮಹಿಳೆ ಸಂಸಾರವೆಂಬ ಚಕ್ಕಡಿಯ ಗಾಲಿಯಾಗಿ, ಸಮಾಜದ ಮುಖವಾಗಿ ಹಾಗೂ ಪುರುಷನ ವ್ಯಕ್ತಿತ್ವಕ್ಕೆ ಸಂಪೂರ್ಣತೆ ತರು ವಂತೆ ಕಾರ್ಯ ನಿರ್ವಹಿಸಿದರೂ ಸಹ ಎರಡನೇ ದರ್ಜೆಯ ಪ್ರಜೆಯಾಗಿ ಕಾಣುತ್ತಿರುವುದು ವಿಷಾ ದಕರ ಎಂದು ಶ್ರೀಮತಿ ಸರ್ವಮಂಗಳಮ್ಮ ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪ ಕರಾದ ಡಾ. ಅನಿತ ದೊಡ್ಡಗೌಡರ್ ಹೇಳಿದ್ದಾರೆ.

ನಗರದ ಕಸ್ತೂರಿಬಾ ಸಮಾಜದ ಕಚೇರಿ ಯಲ್ಲಿ ನಿನ್ನೆ ಏರ್ಪಾಡಾಗಿದ್ದ ಕಸ್ತೂರಿಬಾ ಸಮಾಜದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇತಿಹಾಸದ ಆರಂಭದಿಂದಲೂ ಮಹಿಳೆ ಪುರುಷನಿಗೆ ಹೆಗಲು ಕೊಟ್ಟು ದುಡಿಯುತ್ತಾ ಬಂದಿ ದ್ದಾಳೆ.  ಆದರೂ, ಮಹಿಳೆಯನ್ನು ಸಮಾನವಾಗಿ  ಕಾಣುವ ಸಮಾಜ ರೂಪುಗೊಂಡಿಲ್ಲ ಎಂದರು.

12ನೇ ಶತಮಾನದಲ್ಲಿಯೇ ಶರಣ – ಶರಣೆಯರು ಸಮ ಸಮಾಜಕ್ಕಾಗಿ ಶ್ರಮಿಸಿದ್ದರು. ಅಕ್ಕಮಹಾದೇವಿ ಅವರು ಅಲ್ಲಮಪ್ರಭುವಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ, ತಮ್ಮ ಸ್ಥಾನ ಪಡೆದಿದ್ದರು. ಆದರೆ, 21ನೇ ಶತಮಾನ ಬಂದರೂ ಬಡ ವರ್ಗದ ಮಹಿಳೆಯರು ಶೋಷಣೆಗೆ ಗುರಿಯಾಗುತ್ತಿದ್ದಾರೆ. ವರದಕ್ಷಿಣೆ, ಕುಡಿತ, ಬಡತನ, ಅಜ್ಞಾನಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದವರು ವಿಷಾದಿಸಿದರು.

ಕಸ್ತೂರಿಬಾ ಅವರು ದೃಢ ವ್ಯಕ್ತಿ, ಪ್ರಚಂಡ ಆತ್ಮಶಕ್ತಿ ಹಾಗೂ ಅಸಾಮಾನ್ಯ ಧೈರ್ಯ ಹೊಂದಿದ್ದರು. ಮಹಾತ್ಮ ಗಾಂಧೀಜಿಯವರ ಜೊತೆ ಮದುವೆಯಾದಾಗ ಅನಕ್ಷರಸ್ಥರಾಗಿದ್ದರು. ನಂತರ ಗಾಂಧೀಜಿಯವರಿಂದ ಅಕ್ಷರ ಕಲಿತು, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಬೆನ್ನೆಲುಬಾಗಿದ್ದರು ಎಂದರು.

ಕಸ್ತೂರಿಬಾ ಸಮಾಜದ ಕಾರ್ಯ ನಿರ್ವಹಣೆ ಕುರಿತು ಮಾತನಾಡಿದ ಕಸ್ತೂರಿಬಾ ಸಮಾಜದ ಗೌರವಾಧ್ಯಕ್ಷರಾದ ಸರೋಜ ಚಂದ್ರಶೇಖರ್, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಕಸ್ತೂರಿಬಾ ಸಮಾಜ ತೊಡಗಿಕೊಂಡಿದೆ. ಮಕ್ಕಳಿಗೆ ಸಮವಸ್ತ್ರ, ಪ್ರತಿಭಾವಂತರಿಗೆ ಸನ್ಮಾನ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯದ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಸ್ತೂರಿಬಾ ಸಮಾಜದ ಮಾಜಿ ಅಧ್ಯಕ್ಷರಾದ ಶಶಿಕಲಾ ರುದ್ರಯ್ಯ ಅವರನ್ನು ಸನ್ಮಾನಿಸಲಾಯಿತು. 

ಸತ್ಯಭಾಮ ಮಂಜುನಾಥ್ ವಾರ್ಷಿಕ ವರದಿ ವಾಚಿಸಿದರು. ಕಸ್ತೂರಿಬಾ ಸಮಾಜದ ಅಧ್ಯಕ್ಷ ರಾದ ಪ್ರೊ. ಶಕುಂತಲಾ ಗುರುಸಿದ್ದಯ್ಯ ಸಮಾರಂ ಭದ ಅಧ್ಯಕ್ಷತೆ ವಹಿಸಿದ್ದರು. ಸಂಜನ ಸುಜಿತ್  ಪ್ರಾರ್ಥಿಸಿದರೆ, ಶಕುಂತಲಾ ಪರಮೇಶ್ವರಪ್ಪ ಸ್ವಾಗ ತಿಸಿದರು. ಪ್ರೊ. ಮಂಜುಳ ಮಂಜಪ್ಪ ನಿರೂಪಿ ಸಿದರೆ, ಮಮತ ನಾಗರಾಜ್ ವಂದಿಸಿದರು.

error: Content is protected !!