ಪಾದಯಾತ್ರೆ ತಡೆಗೆ ಹೂಡಿದ ತಂತ್ರವೇ ವೀಕೆಂಡ್ ಕರ್ಫ್ಯೂ

ಪಾದಯಾತ್ರೆ ತಡೆಗೆ ಹೂಡಿದ ತಂತ್ರವೇ ವೀಕೆಂಡ್ ಕರ್ಫ್ಯೂ - Janathavaniಹರಪನಹಳ್ಳಿ, ಜ.23- ತಮಿಳುನಾಡಿನಲ್ಲಿ ಬಿಜೆಪಿ ಬೆಳೆಯಲು ರಾಜ್ಯದ ಹಿತ ಕಡೆಗಣಿಸಿದ ಬಿಜೆಪಿ, ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಹೂಡಿದ ತಂತ್ರವೇ ವೀಕೆಂಡ್ ಕರ್ಫ್ಯೂ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಿಶ್ಲೇಷಕರಾದ ಶ್ರೀಮತಿ ಎಂ.ಪಿ.ವೀಣಾ ಮಾಹಂತೇಶ್ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ,  ಕರ್ನಾಟಕದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಮೇಕೆದಾಟು ಪಾದಯಾತ್ರೆ ಅಕ್ಷರಷಃ ಬಿಜೆಪಿಯ ಬುಡವನ್ನು ನಲುಗಿಸಿದೆ ಎಂದರು.

`ನಮ್ಮ ನೀರು ನಮ್ಮ ಹಕ್ಕು’ ಎಂಬ  ಧ್ಯೇಯದೊಂದಿಗೆ ಕಾಂಗ್ರೆಸ್ ಪಕ್ಷದ ನೇತೃತ್ವದ ಮೇಕೆದಾಟು ಪಾದಯಾತ್ರೆಗೆ  ರಾಜ್ಯದಾದ್ಯಂತ ಸಹಸ್ರಾರು ಜನ ಬಂದಿದ್ದರು. 

ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜರುಗಿದ ಈ ಪಾದಯಾತ್ರೆಯು  ಅಭೂತಪೂರ್ವ ದಾಖಲೆಯತ್ತ ಸಾಗಿ, ಬೆಂಗಳೂರು ತಲುಪಿದರೆ ಬಿಜೆಪಿ ದೊಡ್ಡಮಟ್ಟದ ಹಿನ್ನಡೆ ಅನುಭವಿಸುತ್ತದೆ ಎಂಬ ಕಾರಣಕ್ಕೆ ಜನರ ನೀರಿನ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡದೆ ತಮಿಳುನಾಡಿನಲ್ಲಿ ಬಿಜೆಪಿ ಬೆಳೆಯಲು ರಾಜ್ಯದ ಹಿತ ಕಡೆಗಣಿಸಿದ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಹೂಡಿದ ತಂತ್ರವೇ ಈ ವೀಕೆಂಡ್ ಕರ್ಫ್ಯೂ ಎಂದರು.

ಮೇಕೆದಾಟು ಪಾದಯಾತ್ರೆ ಅಧಿಕೃತ ಘೋಷಣೆಯಾಗುತ್ತಿದಂತೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸಿಕ್ಕ ಸಿಕ್ಕ ಜನರನ್ನು ಕೋವಿಡ್ ಟೆಸ್ಟಿಗೆ ಒಳಪಡಿಸಿ ಪಾಸಿಟಿವಿಟಿ ರೇಟ್ ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿತು ಎಂದು ಹೇಳಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಎಂದು ಪ್ರಚುರ ಪಡಿಸಲಾಯಿತು. ಬಿಜೆಪಿ ಕೊರೊನಾ ಬಗ್ಗೆ ಕಾಂಗ್ರೆಸ್ ನಾಯಕರು ಎಳೆಎಳೆಯಾಗಿ ಬಿಚ್ಚಿಟ್ಟಿರು. ಆದರೆ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿತು. 

ಪಾದಯಾತ್ರೆಯಿಂದ ಕೊರೊನಾ ಹೆಚ್ಚಾಗುತ್ತದೆ ಎನ್ನುವ ಹಸಿ ಸುಳ್ಳುಗಳನ್ನು ಹಬ್ಬಿಸಿದರು. ಜನಸಾಮಾನ್ಯರ ಆರೋಗ್ಯದ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ಕಾಳಜಿ ಇರುವ ಕಾಂಗ್ರೆಸ್ ಪಕ್ಷ ಜನರ ಆರೋಗ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿ ಪಾದಯಾತ್ರೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

ಕೊರೊನಾ ಹೆಸರಿನಲ್ಲಿ ಬಿಜೆಪಿ ಜನರನ್ನು ಯಾವ ರೀತಿ ಮರಳು ಮಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೆ ಜನಸಾಮಾನ್ಯರು ಬಿಜೆಪಿಯವರಂತೆ ಮೆದುಳು ಹೀನರಲ್ಲ. ಎಲ್ಲವನ್ನು ಗಮನಿಸುತ್ತಿದ್ದಾರೆ ಎಂಬುದು ನೆನಪು ಮಾಡಿಕೊಂಡರೆ ಒಳ್ಳೆಯದು ಎಂದರು.

error: Content is protected !!