ಉದ್ಯೋಗ ಖಾತ್ರಿ ಯೋಜನೆಯಡಿ ಸ್ವಚ್ಛಗೊಂಡ ಹೊಲಗಾಲುವೆ

ಮಲೇಬೆನ್ನೂರು, ಜ.20- ಜಿಗಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಾಲುವೆಗಳನ್ನು ಸ್ವಚ್ಛಗೊಳಿಸುತ್ತಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಲಗಾಲುವೆಗಳು ಗಿಡ-ಗಂಟೆಗಳಿಂದ ತುಂಬಿಕೊಂಡು ನೀರು ಸರಾಗವಾಗಿ ಹರಿಯು ವುದಕ್ಕೆ ತೊಂದರೆ ಉಂಟಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಂದ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ರೈತ ಕೆ.ಎಸ್‌. ನಂದ್ಯೆಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಗಳಿಯಲ್ಲಿ 5 ಹೊಲಗಾಲುವೆಗಳು ಮತ್ತು ವಡೆಯರ ಬಸಾಪುರದಲ್ಲಿ 1 ಕಾಲುವೆಯನ್ನು ಸುಮಾರು 100 ಜನ ಕೂಲಿ ಕಾರ್ಮಿಕರನ್ನು ಬಳಸಿ ಸ್ವಚ್ಛಗೊಳಿಸಿದ್ದೇವೆ.

2020-21 ಮತ್ತು 22 ನೇ ಸಾಲಿನ ಕ್ರಿಯಾ ಯೋಜನೆಯಡಿ ಈ ಕಾಮಗಾರಿಗಳನ್ನು ಸೇರಿಸಿದ್ದೆವು. ಇನ್ನೊಷ್ಟು ಹೊಲಗಾಲುವೆಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ನಾಟಿ ಮಾಡುವುದರ ಒಳಗಾಗಿ ಮಾಡುತ್ತೇವೆ ಎಂದು ಜಿಗಳಿ ಗ್ರಾ.ಪಂ. ಪಿಡಿಓ ಉಮೇಶ್‌ ತಿಳಿಸಿದ್ದಾರೆ.

ಪ್ರತಿ ಕೂಲಿ ಕಾರ್ಮಿಕರಿಗೆ 289 ರೂ.ಗಳನ್ನು ದಿನವೊಂದಕ್ಕೆ ನೀಡಲಾಗುವುದು. ಕೂಲಿ ಕಾರ್ಮಿಕರು ಸಹ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಮೇಶ್‌ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯ ಸದ್ಭಳಕೆಯನ್ನು ಜಿಗಳಿ ಗ್ರಾ.ಪಂ. ಸಮರ್ಪಕವಾಗಿ ಮಾಡಿಕೊಳ್ಳುತ್ತಿದೆ ಎಂದು ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್‌ ತಿಳಿಸಿದರು.

error: Content is protected !!