2023 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ

ಕುಂಬಳೂರಿನಲ್ಲಿ ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಸುಣಗಾರ ವಿಶ್ವಾಸ

ಮಲೇಬೆನ್ನೂರು, ಜ.19- ರಾಜ್ಯದಲ್ಲಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ ಸುಣಗಾರ ಹೇಳಿದರು.

ಇಂದು ದಾವಣಗೆರೆಯಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಕುಂಬಳೂರು ಗ್ರಾಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷರೂ, ಗಂಗಾಮತ ಸಮಾಜದ ಹಿರಿಯ ಮುಖಂಡರಾದ ಮಾಗಾನಹಳ್ಳಿ ಹಾಲಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಗಂಗಾಮತ ಸಮಾಜದವರೊಂದಿಗೆ ಸಭೆ ನಡೆಸಿದ ನಂತರ `ಜನತಾವಾಣಿ’ಯೊಂದಿಗೆ ಮಾತನಾಡಿದರು.

ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ ಮತ್ತು ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ರಾಜ್ಯದ ಜನ ಕಾಂಗ್ರೆಸ್ ಬೆಂಬಲಿಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಸುಳ್ಳು ಭರವಸೆ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ಜನ ಈಗಾಗಲೇ ತಿರಸ್ಕರಿಸುತ್ತಿದ್ದಾರೆ. ನಿತ್ಯ ಬಳಕೆಯ ವಸ್ತುಗಳ ದರ ಗಗನಕ್ಕೆ ಏರಿದೆ. ರೈತರ ಬೆಳೆಗಳಿಗೆ ಮಾತ್ರ ಸೂಕ್ತ ಬೆಲೆ ನೀಡದ ಬಿಜೆಪಿ ರೈತ ವಿರೋಧಿ ಎಂದು ಮಂಜುನಾಥ ಸುಣಗಾರ ದೂರಿದರು.

ಈ ಸಂದರ್ಭದಲ್ಲಿ ಮಲೇಬೆನ್ನೂರು ಪುರಸಭೆಯ ನೂತನ ಸದಸ್ಯರಾದ ಮಹ್ಮದ್ ಖಲೀಲ್ ಭೋವಿ ಶಿವು, ರಿಯಾಜ್ ಅಹಮದ್, ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.

ಹಿರಿಯರಾದ ಮಾಗಾನಹಳ್ಳಿ ಹಾಲಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬಿ.ಎಂ.ದೇವೇಂದ್ರಪ್ಪ, ಕೊಕ್ಕನೂರು ಸೋಮಶೇಖರ್, ಕೆ.ಎಸ್.ನಂದ್ಯೆಪ್ಪ, ಗ್ರಾಮದ ಮುಖಂಡರಾದ ಕಣ್ಣಾಳ್ ಹನುಮಂತಪ್ಪ, ಕಡೇಮನೆ ಬಸವರಾಜಪ್ಪ, ಕರಡೇರ ರಾಜಪ್ಪ, ಕೆ.ಪುಟ್ಟಪ್ಪ, ಎಂ.ಹನುಮಂತಪ್ಪ, ಎಂ.ಹೆಚ್.ಶಿವರಾಮ್‌ಚಂದ್ರ, ಎಂ.ಹೆಚ್.ಪರಮೇಶ್ವರಪ್ಪ, ಮಲೇಬೆನ್ನೂರು ಪುರಸಭೆ ಮಾಜಿ ಸದಸ್ಯ ಎ.ಆರೀಫ್ ಅಲಿ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರದ ವೀರಭದ್ರಪ್ಪ, ತಾ. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಂ.ವಾಸುದೇವಮೂರ್ತಿ ಯಲವಟ್ಟಿ ಕೊಟ್ರೇಶ್ ನಾಯ್ಕ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!