ಬಡವರ ಬದುಕನ್ನು ಬರಡಾಗಿಸಿದ ಕೀರ್ತಿ ಬಿಜೆಪಿಯದ್ದು

ರಾಣೇಬೆನ್ನೂರು, ಜ. 18- ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹಸನಾಗಿದ್ದ ಬಡವರ ಬದುಕನ್ನು ಬರಡನ್ನಾಗಿ ಮಾಡಿದ, ಪಡಿತರ ಅಕ್ಕಿ ಕಸಿದ, ಸಿಲಿಂಡರ್, ಡೀಸೆಲ್, ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಭಾಗ್ಯಜ್ಯೋತಿಯಂಥ ಯೋಜನೆಗಳನ್ನು ಕಸಿದ, ಪ್ರತಿಯೊಂದಕ್ಕೂ ಜಿ.ಎಸ್.ಟಿ.  ಟ್ಯಾಕ್ಸ್ ವಸೂಲಿ ಮಾಡುತ್ತಿರುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಮಾಜಿ ಸ್ವೀಕರ್ ಕೆ.ಬಿ. ಕೋಳಿವಾಡ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದ ಯುವ ಕಾಂಗ್ರೆಸ್ ಸಂಘಟನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವ ಸೆಗಳನ್ನು ನಂಬಿ ಯುವಕರು ಬಿಜೆಪಿ ಕಡೆ ಮುಖ ಮಾಡಿ ಸಾಕಷ್ಟು ತೊಂದರೆ ಅನುಭವಿಸುವಂತಾ ಗಿದೆ. 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಠಿಸು ತ್ತೇನೆ ಎಂದು ಹೇಳಿದ ಮೋದಿ 10 ಕೋಟಿ ಯುವ ಕರನ್ನು ಬೀದಿಗೆ ತಳ್ಳಿದರು. ಕೋವಿಡ್ ಹೆಸ ರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಬಡವರ ಯೋಜ ನೆಗಳ್ನು ಕಸಿದ ಬಿಜೆಪಿ ಮತ್ತು ಮೋದಿಯ ಬಗ್ಗೆ ಯುವ ಜನತೆ ಭ್ರಮನಿರಸನಗೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಕೆ.ಬಿ. ಕೋಳಿವಾಡರನ್ನು ಗ್ರಾಮದ ಮಹಿಳೆಯರು ಸತ್ಕರಿಸಿದರು.

ವೇದಿಕೆಯ ಮೇಲೆ ಮಂಜನಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾರ್ಕಿ, ಇಕ್ಬಾಲ್‌ ಸಾಬ್‌ ರಾಣೇಬೆನ್ನೂರು, ರವೀಂದ್ರಗೌಡ ಎಫ್ ಪಾಟೀಲ, ಹರಿಹರಗೌಡ ಪಾಟೀಲ, ಪ್ರಶಾಂತ ರಡ್ಡಿ,  ಶಾಂತವ್ವ ಹಿರೇಮರದ ಮುಂತಾದವರಿದ್ದರು. 

error: Content is protected !!