ಶಿವಮೊಗ್ಗ-ರಾಣೇಬೆನ್ನೂರು ಅವೈಜ್ಞಾನಿಕ ರೈಲ್ವೇ ಮಾರ್ಗ ಬದಲಿಸಲು ಮನವಿ

ದಾವಣಗೆರೆ, ಜ.16- ಶಿವಮೊಗ್ಗ- ರಾಣೇಬೆನ್ನೂರು ರೈಲ್ವೆ ಯೋಜನೆಯಲ್ಲಿ ಶಿಕಾರಿಪುರ- ಮಾಸೂರು- ರಾಣೇಬೆನ್ನೂರು ರೈಲ್ವೆ ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ
ಹೆಚ್.ಟಿ. ಬಳಿಗಾರ್ ದೂರಿದರು.      

ಯೋಜನೆ ಬದಲಿಸುವಂತೆ  ಒತ್ತಾಯಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಹಿರಿಯ ಭೂ ಸ್ವಾಧೀನಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.

ಈ ಯೋಜನೆಗೆ ಹೊಸ ರೈಲು ಮಾರ್ಗ ಸಂಚರಿಸಲು ಅವಶ್ಯವಿರುವ ಭೂ-ಸ್ವಾಧೀನ ಕಾರ್ಯವನ್ನು ಕೆ.ಐ.ಎ.ಡಿ.ಬಿ ಯ ಕಾಯ್ದೆ ಯಡಿಯಲ್ಲಿ ಎರಡನೇ ಹಂತದಲ್ಲಿ ಪ್ರಾರಂಭಿಸ ಲಾಗಿದ್ದು, ಈ ರೈಲ್ವೆ ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕ ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಕುಟುಂಬಗಳೇ ವಾಸಿಸುವ ಗ್ರಾಮೀಣ ಪ್ರದೇಶವಾಗಿದ್ದು, ಇದು ಅವಾಸ್ತವಿಕ ಮತ್ತು ಅವೈಜ್ಞಾನಿಕ ರೈಲ್ವೆ ಯೋಜನೆ ಆಗುವುದರಲ್ಲಿ ಅನುಮಾನವಿಲ್ಲ.   ಈ ಕೂಡಲೇ ಸಂಬಂಧಪಟ್ಟ ರೈಲ್ವೆ ಇಲಾಖೆ ಉದ್ದೇಶಿತ ಪೂರ್ವ ನಿಯೋಜಿತ ಮಾರ್ಗವನ್ನು ಕೈಬಿಡುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಮತಾ ಪರಮೇಶ್ವರಪ್ಪ, ನೀಲಮ್ಮ, ಎಂ.ಡಿ. ರಸೂಲ್, ಬಸವರಾಜಪ್ಪ, ವೀರಭದ್ರಪ್ಪ, ಲೋಕಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.

error: Content is protected !!