ಹರಪನಹಳ್ಳಿ, ಜ.11- ವಾಲ್ಮೀಕಿ ಸಮು ದಾಯ ಭವನದ ಮುಂದುವರೆದ ಕಾಮಗಾರಿಗೆ ಇದೀಗ 50 ಲಕ್ಷ ರೂ.ಬಿಡುಗಡೆಯಾಗಿದ್ದು, ಇನ್ನೂ 50 ಲಕ್ಷ ರೂ.ಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡಿಸುವುದಾಗಿ ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಅರಸಿಕೆರಿ ಬೈಪಾಸ್ ರಸ್ತೆಯಲ್ಲಿ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ಸುಸಜ್ಜಿತವಾಗಿ ನಿರ್ಮಾಣ ವಾಗಲಿದೆ. ಪ್ರಸ್ತುತ 1 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದವರು ಹೇಳಿದರು.
ಹರಪನಹಳ್ಳಿ ಪಟ್ಟಣದ ಐತಿಹಾಸಿಕ ಹಿರೇಕೆರೆಯಲ್ಲಿ ಬಳ್ಳಾರಿ ಜಾಲಿ ಬೆಳೆದು ಕೆರೆ ಹಾಳಾಗಿದ್ದು, ಕೆರೆ ದುರಸ್ತಿ ಬಗ್ಗೆ ಮಾತನಾಡಿದ ಶಾಸಕರು, ಜಂಗಲ್ ಕಟಿಂಗ್ ಗೆ ಪ್ರಸ್ತಾವನೆ ಸಿದ್ಧವಾಗಿದೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಕೆರೆಗೆ ನದಿ ನೀರು ಬರುವುದ ರೊಳಗಾಗಿ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ, ಜಿಲ್ಲಾ ಬಿಜೆಪಿ ಎಸ್.ಟಿ.ಘಟಕದ ಕಾರ್ಯದರ್ಶಿ ಆರ್ .ಲೋಕೇಶ್, ಪುರಸಭಾ ಸದಸ್ಯರುಗಳಾದ ದ್ಯಾಮಜ್ಜಿ ರೊಕ್ಕಪ್ಪ, ಕೆಂಗಳ್ಳಿ ಪ್ರಕಾಶ ಮುಖಂಡರಾದ ಕೆ.ಎಂ.ಪ್ರಾಣೇಶ್, ಯು.ಪಿ.ನಾಗರಾಜ ಸೇರಿದಂತೆ ಇತರರು ಹಾಜರಿದ್ದರು.