ಕಡಲೆ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಕಲ್ಲೇರುದ್ರೇಶ್ ಒತ್ತಾಯ

ಜಗಳೂರು, ಜ.11- ಕಡಲೆ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ಜೂನ್ ವರೆಗೆ ಖರೀದಿಗೆ ಅವಧಿ ವಿಸ್ತರಿಸಿ ರೈತರಿಗೆ ನೆರವಾಗಬೇಕು ಎಂದು ಜೆಡಿಎಸ್ ಮುಂಖಡ ಕೆ.ಬಿ.ಕಲ್ಲೇರುದ್ರೇಶ್ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಗಿ ಖರೀದಿ ಕೇಂದ್ರ ತೆರೆದಿದ್ದು, ರೈತರಿಂದ   50ಕ್ವಿಂ.ರಾಗಿ ಖರೀದಿಗೆ ಅವಕಾಶ ನೀಡಬೇಕು. ಅಲ್ಲದೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಜಿಪಿಎಸ್ ನೊಂದಿಗೆ ಅರ್ಹರಿಂದ ಖರೀದಿಸಬೇಕು ಎಂದು ಆಗ್ರಹಿಸಿದರು.

ರೈತರು ಕಷ್ಟದ ನೆಪಯೊಡ್ಡಿ ವಿಂಡ್ ಪವರ್ ಗಳಿಗೆ ತಮ್ಮ ಜಮೀನು ಮಾರಾಟ ಮಾಡಿದರೆ ಭವಿಷ್ಯದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ತಾಳ್ಮೆಯಿಂದ ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್ ಮತ್ತು ಓಮಿಕ್ರಾನ್ ಸೊಂಕು ನಿಯಂತ್ರಣಕ್ಕೆ ತಾಲ್ಲೂಕು ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿದೆ ಎಂಬ ಮಾಹಿತಿ ಕೇಳಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಕಳೆದ ವರ್ಷ ಆಮ್ಲಜನಕ ಘಟಕ ಉದ್ಘಾಟನೆಯಾಗಿದ್ದು, ಶೀಘ್ರ ಕಾರ್ಯಗತವಾಗಬೇಕು. ಹೆಚ್ಚುವರಿಯಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರತಿನಿತ್ಯ ಎರಡು ಬಾರಿ ಸ್ಯಾನಿಟೇಸೇಷನ್ ಮಾಡಬೇಕು. ಪಿಡಿಓಗಳು ಕೇಂದ್ರದಲ್ಲಿದ್ದು, ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕಲ್ಲೇರುದ್ರೇಶ್ ಒತ್ತಾಯಿಸಿದರು.

ಸಂದರ್ಭದಲ್ಲಿ ಮುಖಂಡರಾದ ಕೌಸರ್, ಗ್ರಾ.ಪಂ ಮಾಜಿ ಅಧ್ಯಕ್ಷ ಕ್ಯಾಸನಹಳ್ಳಿ ಮಹಾಂತೇಶ್, ಉಸ್ಮಾನ್ ಅಲಿ, ಭೂಷಣ, ಅಜ್ಜಣ್ಣ, ಗ್ರಾ.ಪಂ. ಸದಸ್ಯ ಕಲ್ಲೇಶ್, ಸಿದ್ದೇಶ್, ಉಮಾಮಹೇಶ್, ಸತೀಶ್ ಇತರರು ಇದ್ದರು.

error: Content is protected !!