ಜಗಳೂರು, ಜ.11- ದ್ವಿಮುಖ ರಸ್ತೆ, ಹೈಮಾಸ್ಟ್ ದೀಪಗಳನ್ನು ಅಳವಡಿಸಿ, ಪಟ್ಟಣದ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.
ಪಟ್ಟಣದ ರಾಮಾಲಯ ರಸ್ತೆಯಲ್ಲಿ ಹೈಮಾಸ್ಟ್ ದೀಪ ಲೋಕಾರ್ಪಣೆಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಪಟ್ಟಣದ 18 ವಾರ್ಡ್‌ಗಳಿಗೆ ತಲಾ ಒಂದರಂತೆ, ಪ್ರವಾಸಿ ಮಂದಿರ, ವಾಲ್ಮೀಕಿ ಭವನ,ಚಳ್ಳಕೆರೆ ರಸ್ತೆ ಪಾರ್ಕ್, ಸ್ಟೇಡಿಯಂ ಒಳಾಂಗಣದಲ್ಲಿ 3 ಸೇರಿ ಒಂದು ಕೋಟಿ ರೂ. ವೆಚ್ಚದಲ್ಲಿ 27 ದೀಪಗಳನ್ನು ಅಳವಡಿಸಲಾಗಿದ್ದು, ಪಟ್ಟಣ ಬೆಳಕಿನಿಂದ ಸದಾ ಪ್ರಜ್ವಲಿಸಲಿದೆ ಎಂದರು.
ಪಟ್ಟಣ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದ್ದು, ಶೀಘ್ರ ಸರ್ಕಾರದಿಂದ ಎಸ್ ಎಫ್ ಸಿ ಅನುದಾನ ದೊರೆತ ಮರುಕ್ಷಣವೇ ಡ್ರೈನೇಜ್ ಮತ್ತು ವಾಯುವಿಹಾರಕ್ಕೆ ಸುಸಜ್ಜಿತ ಪಾರ್ಕ್ ನಿರ್ಮಾಣ ಮಾಡಲಾಗುವುದು ಪಟ್ಟಣವನ್ನು ಸುಂದರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಪ.ಪಂ ಅಧ್ಯಕ್ಷ ಎಸ್. ಸಿದ್ದಪ್ಪ, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ಪಾಪಲಿಂಗಪ್ಪ, ದೇವರಾಜ್, ನಾಮನಿರ್ದೇಶಿತ ಸದಸ್ಯರಾದ ಬಿ.ಪಿ.ಸುಭಾನ್, ರುದ್ರಮುನಿ, ಸಹಾಯಕ ಇಂಜಿನಿಯರ್ ಶಿವಮೂರ್ತಿ, ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್, ಖಿಫಾಯತ್ ಮುಂತಾದವರು ಇದ್ದರು.