ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಬಸವಾಪಟ್ಟಣ
ಚನ್ನಗಿರಿ, ಜ. 11- ಅನ್ಯಾಯ, ಅಸಮಾನತೆ, ಸರ್ವಾಧಿಕಾರದ ವಿರುದ್ಧ ಸಿಡಿಯುತ್ತಲೇ ಇದ್ದ ಈ ನಾಡಿನ ಹಿರಿಯ ಚಿಂತಕರಲ್ಲಿ ಒಬ್ಬರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ್ ವೈಚಾರಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ವಲಯವನ್ನು ಸೃಷ್ಟಿ ಮಾಡಿದ್ದರು ಎಂದು ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಬಸವಾಪಟ್ಟಣ ತಿಳಿಸಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಚಂಪಾ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಸದಾ ಕನ್ನಡಕ್ಕಾಗಿ ದುಡಿಯುತ್ತಿದ್ದ ಮತ್ತು ಮಿಡಿಯುತ್ತಿದ್ದ ಕನ್ನಡ ಸಾಹಿತ್ಯದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಯು. ಚನ್ನ ಬಸಪ್ಪ ಮಾತ ನಾಡಿ, ಕನ್ನಡ ಸಾರ ಸ್ವತ ಲೋಕ ದಲ್ಲಿ ನೇರ, ನಿಷ್ಠುರ ನಡೆ ನುಡಿಗೆ ಹೆಸರಾಗಿದ್ದ ಚಂಪಾ ಕನ್ನಡ ಸಾಹಿತ್ಯ ಪರಿ ಷತ್ತಿನ ಅಧ್ಯಕ್ಷರಾಗಿ ದ್ದಾಗ ಕನ್ನಡ ಸಾಹಿತ್ಯ ಪ್ರಪಂಚದ ‘ಸಂಕ್ರಮಣ’ ಕಾಲ ಘಟ್ಟವನ್ನು ನಾವೆಂದು ಮರೆಯುವಂತಿಲ್ಲ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹೆಚ್.ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಮೇರು ಸಾಹಿತಿ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕದ ಬೇರು ಸಡಿಲವಾದಂತಾಗಿದೆ ಎಂದರು.
ಕಸಾಪ ಪ್ರಮುಖರಾದ ಜಿ.ಚಿನ್ನಸ್ವಾಮಿ, ಬಿ.ಈ. ಸಿದ್ದಪ್ಪ, ಎಂ.ಎಸ್. ಬಸವನಗೌಡ, ಟಿ.ಎಸ್. ಸುವರ್ಣಮ್ಮ, ಪ್ರೇಮ್ಚಂದ್, ಟಿ.ವಿ. ಶಿವಲಿಂಗಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಪಿ.ವಿ. ಸ್ವಾಮಿ ಉಪಸ್ಥಿತರಿದ್ದರು.