ದಾವಣಗೆರೆ, ಜ.9- ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಯೋಗ ಪದಕ ಪಡೆಯುವ ನಿಟ್ಟಿನಲ್ಲಿ ನಗರದ ಶ್ರೀ ತರಳಬಾಳು ವಸತಿ ಶಾಲೆಯಲ್ಲಿ ಮೊನ್ನೆ ಯೋಗ ಶಿಬಿರವನ್ನು ನಡೆಸಲಾಯಿತು. ಇದರಲ್ಲಿ ಶ್ರೀ ತರಳಬಾಳು ಸ್ಕೌಟ್ಸ್ ಮತ್ತು ಗೈಡ್ಸ್, ಮಾಗನೂರು ಬಸಪ್ಪ ಸ್ಕೌಟ್ಸ್ – ಗೈಡ್ಸ್, ಬಾಪೂಜಿ ಓಪನ್ ಸ್ಕೌಟ್ಸ್ ಟ್ರೂಪ್, ಮದರ್ ತೆರೇಸಾ ಓಪನ್ ಗೈಡ್ ಕಂಪನಿಯ ಮಕ್ಕಳು ಭಾಗವಹಿಸಿದ್ದರು.
ಶಿಬಿರದಲ್ಲಿ ಪ್ರಾಣಾಯಾಮ, ಸೂರ್ಯ ನಮಸ್ಕಾರದ ಬಗ್ಗೆ ಮಾಹಿತಿ ಪಡೆದು, ಪ್ರಯೋ ಗಾತ್ಮಕವಾಗಿ ಮಾಡಿದರು. ಯೋಗವನ್ನು ವೀಕ್ಷಿಸಲು ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ಸ್‌ನ ಪ್ರಿನ್ಸಿಪಾಲ್ ಕೆ.ಎಸ್. ಸೋಮಶೇಖರ್, ಸ್ಕೌಟ್ ಮಾಸ್ಟರ್ ಟಿ.ಎಂ. ರವೀಂದ್ರ ಸ್ವಾಮಿ ಹಾಗೂ ಶಶಿ ಅವರುಗಳು ಭಾಗವಹಿಸಿ, ಮಕ್ಕಳಿಗೆ ಯೋಗದ ಉಪಯೋಗಗಳನ್ನು ಹೇಳಿಕೊಟ್ಟರು.