ಸರ್ಕಾರಿ ಬಸ್ ಸೀಮಿತ, ಖಾಸಗಿ ಅನುಮಾನ
ಎಂದಿನಂತೆ ಇದ್ದ ಜನಜಂಗುಳಿ
ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾ ಣಗಳಲ್ಲಿ ಗುರುವಾರ ಜನಜಂಗುಳಿ ಎಂದಿನಂತೆ ಇದ್ದದ್ದು ಕಂಡು ಬಂತು. ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೆ ತಂದ ನಂತರವೂ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಆದರೆ, ಬೆಳಿಗ್ಗೆ ಪ್ರಯಾಣಿಕರ ಸಂಖ್ಯೆ ಬಹುತೇಕ ಯಥಾಸ್ಥಿತಿ ಇದ್ದರೂ, ರಾತ್ರಿ ಸಂಚರಿಸು ವವರ ಪ್ರಮಾಣ ಕಡಿಮೆಯಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದ್ದಾರೆ.
ದಾವಣಗೆರೆ, ಜ. 6 – ವಾರಾಂತ್ಯದ ಕರ್ಫ್ಯೂ ಇಂದು ಶುಕ್ರವಾರ ರಾತ್ರಿಯಿಂದ ಆರಂಭವಾಗಲಿದ್ದು, ವಾರಾಂತ್ಯದ ಪ್ರಯಾಣ ಮಾಡುವವರು ಮುನ್ನೆಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ಸರ್ಕಾರಿ ಬಸ್‌ಗಳು ವಿರಳವಾಗುವ ಸಾಧ್ಯತೆ ಇದ್ದರೆ, ಖಾಸಗಿ ಬಸ್‌ಗಳು ಬೀದಿಗಿಳಿಯು ವುದು ಬಹುತೇಕ ಅನುಮಾನವಾಗಿದೆ.
ಕೊರೊನಾ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ರಾಜ್ಯ ಸರ್ಕಾರ, ವಾರಾಂತ್ಯದ ಕರ್ಫ್ಯೂ ವೇಳೆ ಬಸ್ ಸಂಚಾರದ ಮೇಲೆ ಸ್ಪಷ್ಟ ನಿಷೇಧ ಹೇರಿಲ್ಲ. ಆದರೆ, ಬೇಡಿಕೆ ನೋಡಿಕೊಂಡು ಅಗತ್ಯವಿರುವಷ್ಟೇ ಬಸ್ ಬಿಡಲು ಕೆ.ಎಸ್.ಆರ್.ಟಿ.ಸಿ. ಸೂಚನೆ ನೀಡಿದೆ. ಆನ್‌ಲೈನ್ ಮೂಲಕ ಆಗುವ ಬುಕಿಂಗ್‌ಗೆ ಅನುಗುಣವಾಗಿ ಬಸ್‌ಗಳನ್ನು ಬಿಡಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಮತ್ತೊಂದೆಡೆ, ಕರ್ಫ್ಯೂ ವೇಳೆ ಅನುಮತಿ ಇದ್ದರೂ ಸಾಕಷ್ಟು ಖಾಸಗಿ ಬಸ್‌ಗಳು ಬೀದಿಗಿಳಿಯುವ ಸಾಧ್ಯತೆ ಇಲ್ಲ. ಹೀಗಾಗಿ ಜನರು ವಾರಾಂತ್ಯದ ಕರ್ಫ್ಯೂ ವೇಳೆ ಪ್ರಯಾಣ ಮಾಡಲು ಕಷ್ಟಗಳು
ಸಾಗಾಣಿಕೆ ಮತ್ತು ಆರೋಗ್ಯ ಸೇವಾ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ವೈದ್ಯಕೀಯ ಸೇವೆ, ದಿನಸಿ ಅಂಗಡಿ, ಹಣ್ಣು, ತರಕಾರಿ, ಹಾಲು ಮಾರಾಟ ಎಂದಿನಂತೆ ಇರಲಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳು ಸಂಚರಿಸಲಿವೆ. ಆದರೆ ನಗರ ಪ್ರದೇಶಗಳಲ್ಲಿ ಅಗತ್ಯ ಮತ್ತು ತುರ್ತು ಸೇವೆಗಾಗಿ ಬಸ್‍ಗಳು ರಸ್ತೆಗಿಳಿಯಲಿವೆ.
ಉಳಿದಂತೆ ಆಟೋ, ಟ್ಯಾಕ್ಸಿ ಹಾಗೂ ಸಾರ್ವ ಜನಿಕ ವಾಹನಗಳು ರಸ್ತೆಗಿಳಿಯುವಂತಿಲ್ಲ. ಹೋಟೆ ಲ್‍ಗಳಲ್ಲಿ ಪಾರ್ಸೆಲ್‍ಗಳಿಗೆ ಮಾತ್ರ ಅವಕಾಶವಿ ರುತ್ತದೆ. ಉಳಿದಂತೆ ಬಾರ್, ಪಬ್, ಕ್ಲಬ್, ಸಿನಿಮಾ ಮಂದಿರ ಪೂರ್ಣವಾಗಿ ಬಂದ್ ಆಗಿರುತ್ತವೆ. ಎರಡು ದಿನಗಳ ಕಾಲ ಪಾರ್ಕ್‍ಗಳು ತೆರೆಯುವಂತಿಲ್ಲ. ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಮುಖ್ಯರಸ್ತೆಗಳು, ಟೋಲ್‍ಗಳು ಮತ್ತು ಮೇಲ್ಸೇತುವೆಗಳನ್ನು ಮುಚ್ಚುವಂತೆ ಆದೇಶ ಮಾಡಲಾಗಿದೆ. ಪ್ರಮುಖವಾಗಿ ಗಡಿ ಭಾಗ ಹಾಗೂ ನಗರ, ಪಟ್ಟಣ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಅಗತ್ಯ ಸೇವೆ ವಾಹನಗಳಿಗೆ ಅವಕಾಶ ನೀಡಿ, ಉಳಿದ ಸಾರ್ವಜನಿಕ ವಾಹ ನಗಳ ತಡೆಗೆ ಅನುಮತಿ ನೀಡದಿರಲು ಸೂಚಿಸಲಾಗಿದೆ.
ತುರ್ತು ಇಲ್ಲವೇ ಅಗತ್ಯ ಸೇವೆಗೆ ಪ್ರಯಾಣ ಮಾಡಲು ದಾಖಲಾತಿ ನೀಡಿ, ಸಂಚರಿಸಲು ಅನುವು ಮಾಡಿಕೊಡ ಲಾಗಿದೆ. ಒಂದು ವೇಳೆ ಅನಗತ್ಯ ಕಾರಣ ನೀಡಿ ಓಡಾಡಲು ಮುಂದಾದರೆ ಅಂತಹ ವಾಹನಗಳು ಜಪ್ತಿಯಾಗಲಿವೆ.
ಸರ್ಕಾರಿ ಸ್ವಾಮ್ಯದ ಕಚೇರಿ, ಐಟಿ-ಬಿಟಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ತಮ್ಮ ಸಂಸ್ಥೆಯ ಗುರುತಿನ ಚೀಟಿ ತೋರಿಸಿ, ಓಡಾಡಬಹುದಾಗಿದೆ.