ರಾಣೇಬೆನ್ನೂರು, ಜ.5- ರಾಣೇಬೆನ್ನೂರಿನಿಂದ ಮಂಗಳೂರು ಮತ್ತು ಗೋವಾದ ಮಾಪ್ಸಾಕ್ಕೆ ಇಂದಿನಿಂದ ವಾಯವ್ಯ ಸಾರಿಗೆ ಬಸ್ ಪ್ರಾರಂಭಿಸಲಾಗಿದ್ದು, ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಚಾಲನೆ ನೀಡಿದರು.
ನಗರದಿಂದ ಪ್ರತಿದಿನ ರಾತ್ರಿ 8.30 ಕ್ಕೆ ಹೊರಡುವ ಎರಡು ಬಸ್ಗಳು ಬೆಳಿಗ್ಗೆ 6 ಗಂಟೆಗೆ ಮಾಪ್ಸಾ ಮತ್ತು ಮಂಗಳೂರು ತಲುಪಲಿವೆ. ಅಲ್ಲಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ ರಾಣೇಬೆನ್ನೂರಿಗೆ ಬರಲಿವೆ. ಈ ಎರಡೂ ಬಸ್ಗಳ ಪ್ರಯಾಣದ ಸಮಯ ಮತ್ತು ದೂರ ಸ್ವಲ್ಪ ಹೆಚ್ಚೆನಿಸಿದರೂ ಸಹ ಟಿಕೆಟ್ ದರ ಕಡಿಮೆ ಇದೆ. ರಾಣೇಬೆನ್ನೂರು ಜೊತೆಗೆ ಬ್ಯಾಡಗಿ, ಹಿರೇಕೆರೂರು, ಶಿರಾಳಕೊಪ್ಪ ಮುಂತಾದ ತಾಲ್ಲೂಕಿನ ಪ್ರಯಾಣಿಕರಿಗೂ ಸೇವೆ ಒದಗಿಸಲು ಮಾರ್ಗ ರೂಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಅರಣ್ಯ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಭಾರತಿ ಜಂಬಗಿ, ನಗರಸಭೆ ಸದಸ್ಯರಾದ ಪಾಂಡುರಂಗ ಗಂಗಾವತಿ, ಎಂ.ಬಿ.ಅಂಗಡಿ, ಗಂಗಾ ಬ್ಯಾಂಕ್ ಅಧ್ಯಕ್ಷ ರತ್ನಾಕರ ಕುಂದಾಪುರ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.