ಎವಿಕೆ ರಸ್ತೆಯಲ್ಲಿ ಬೀದಿದೀಪ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಪ್ರತಿಭಟನೆ

ದಾವಣಗೆರೆ, ಜ. 4- ನಗರದ ಎವಿಕೆ ರಸ್ತೆಯಲ್ಲಿ  ಬೀದಿ ದೀಪ ನಿರ್ವಹಣೆ ಮಾಡದ ಮಹಾನಗರ ಪಾಲಿಕೆ ವಿರುದ್ಧ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಹಾಗೂ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ  ನೇತೃತ್ವದಲ್ಲಿ ರಸ್ತೆಯಲ್ಲಿರುವ ವರ್ತಕರು ಮಳಿಗೆಯ ಮಾಲೀಕರು ಪಿಜೆ ಹೋಟೆಲ್‌ನಿಂದ ಚೇತನಾ ಹೋಟೆಲ್ ವರೆಗೂ ಪಾದಯಾತ್ರೆ ಮೂಲಕ ಕ್ಯಾಂಡಲ್ ಹಚ್ಚಿ ಕೊಂಡು  ಪ್ರತಿಭಟನೆ ನಡೆಸಿದರು.

ಈ ಹಿಂದೆ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ನವರು ಎವಿಕೆ ರಸ್ತೆಗೆ ಸುಂದರವಾದ ಬೀದಿ ದೀಪಗಳನ್ನು ಅಳವಡಿಸಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಪಾಲಿಕೆ ಸದಸ್ಯ, ಮಾಜಿ ಮೇಯರ್ ಬಿ.ಜೆ. ಅಜಯ್ ಕುಮಾರ್  ನಿರ್ಲಕ್ಷ್ಯತನದಿಂದ  ರಾತ್ರಿ ವೇಳೆಯಲ್ಲಿ ಕತ್ತಲೆ ತುಂಬಿರುವ ವಾತಾವರಣ ತುಂಬಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎವಿಕೆ ರಸ್ತೆಯ ವರ್ತಕರಾದ ಇಂದೂಧರ್ ನಿಶಾನಿಮಠ, ಮಂಜುನಾಥ್,  ಮುರಾರಿರಾವ್,  ಪಿಜೆ ಬಡಾವಣೆ ವಾರ್ಡ್ ಮುಖಂಡರಾದ  ರೇವಣಪ್ಪ, ಪಂಚಪ್ಪ, ತೇರದಾಳ್ ಪರಸಪ್ಪ, ಬುನಿಯನ್ ಭಾಸ್ಕರ್, ಕೇರಂ ಗಣೇಶ್, ಯತಿರಾಜ ಮಠದ್,  ಬಸವರಾಜ್, ತಿಮ್ಮೇಶ್,  ಅಂತೂಗೋಪಾಲ್,  ಮಾಂತೇಶ, ರವಿ, ಎಸ್.ಸಿದ್ದೇಶ್,  ಯುವರಾಜ್ ಮುಂತಾದವರಿದ್ದರು.

error: Content is protected !!