ದಾವಣಗೆರೆ, ಜ.3- ವಿದ್ಯಾನಗರ ವಿನಾಯಕ ಬಡಾವಣೆಯ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ವಿನೂತನ ಮಹಿಳಾ ಸಮಾಜದ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾಜದ ಅಧ್ಯಕ್ಷೆ ಶ್ರೀಮತಿ ರೇಖಾ ಓಂಕಾರಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿನೂತನ ಮಹಿಳಾ ಸಮಾಜದ ಪದಾಧಿಕಾರಿಗಳಾದ ಶೈಲಜಾ ತಿಮ್ಮೇಶ್, ಸಾವಿತ್ರಿ ಗವಿಸಿದ್ದೇಶ್, ಮಮತ ಜೈಕುಮಾರ್, ಸುಧಾ ಪಾಟೀಲ್, ಲಲಿತ ಪಾಟೀಲ್, ಶಶಿ ಶಿವಯ್ಯ, ಮಮತ ಸುರೇಶ್, ಚೇತನ ಮಂಜುನಾಥ್, ಮಂಜುಳಾ ನಾಗರಾಜ್, ಲೀಲಾ ಶೇಖರ್ ಹಾಗೂ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್, ವಿನಾಯಕ ಬಡಾವಣೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯು. ಸದಾಶಿವಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ವೀಣಾ ನಂಜಪ್ಪ ಮತ್ತಿತರರು ಇದ್ದರು.