ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು

ಹರಪನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಯು. ಬಸವರಾಜಪ್ಪ ಅಧಿಕಾರ ಸ್ವೀಕಾರ

ಹರಪನಹಳ್ಳಿ, ಜ. 1- ಅರ್ಹ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು. ದಾಖಲಾದ ಎಲ್ಲಾ ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಬೇಕು. ಹಾಜರಾದ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕಲಿಕೆಯಾಗಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿದರು.

ಹರಪನಹಳ್ಳಿ ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಗಮಿಸಿ, ಬುಧವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 1 ರಿಂದ 10ನೇ ತರಗತಿ ಮಕ್ಕಳ ಗುಣಮಟ್ಟದ ಶಿಕ್ಷಣದ ಕಡೆ ಗಮನ ನೀಡುತ್ತೇನೆ.  ವಿಜಯನಗರ ಜಿಲ್ಲೆಯಲ್ಲಿ ಹರಪನಹಳ್ಳಿ ತಾಲ್ಲೂಕು ಉತ್ತಮ ಶೈಕ್ಷಣಿಕ ಬ್ಲಾಕ್ ಆಗಿ ಹೊರ ಹೊಮ್ಮಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ ಎಂದರು.

ಅಧಿಕಾರ ವಹಿಸಿಕೊಂಡ ಬಿಇಓ ಬಸವರಾಜಪ್ಪ ಅವರನ್ನು ಶಿಕ್ಷಕರ ಸಂಘ, ನೌಕರರ ಸಂಘಗಳ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಸನ್ಮಾನಿಸಿ, ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜಪ್ಪ ಸಂಗಪ್ಪನವರ, ಕ್ಷೇತ್ರ ಸಮನ್ವಯಾಧಿಕಾರಿ ಹುಸೇನ್ ಪೀರ್, ದೈಹಿಕ ಪರಿವೀಕ್ಷಕ ರೇವಣ್ಣ, ಇಸಿಓ ಗಿರಜ್ಜಿ ಮಂಜುನಾಥ, ಬಿಆರ್‌ಪಿ ನಾಗರಾಜ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಜಿ. ಪದ್ಮಲತಾ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ಧಲಿಂಗನಗೌಡ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕಲಿವೀರ ಕಳ್ಳಿಮನಿ, ಕಾರ್ಯದರ್ಶಿ ಎಎಸ್ಎಂ ಗುರುಪ್ರಸಾದ್, ಶಿಕ್ಷಕರ ಪತ್ತಿನ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ, ಶಿಕ್ಷಕರುಗಳಾದ ದೇವೇಂದ್ರಗೌಡ, ನೀಲಗುಂದ ಕೊಟ್ರೇಶ, ಕಾಟಿ ಹನುಮಂತಪ್ಪ, ಕೊಟ್ರೇಶ, ಸಿದ್ದೇಶ, ವಿಜಯಕುಮಾರ್ ಉಪಸ್ಥಿತರಿದ್ದರು.

error: Content is protected !!