ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಶಾಸಕ ರಾಮಪ್ಪಗೆ ಮನವಿ

ಹರಿಹರ, ಜ.2- ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ನೀಡುವಂತೆ ಹಾಗೂ ಎನ್.ಪಿ.ಎಸ್. ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವಂತೆ ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಒತ್ತಡ ಕಡಿಮೆ ಮಾಡಲು ಹಾಗೂ ಸಿ ಅಂಡ್ ಆರ್ ನಿಯಮ  ತಿದ್ದುಪಡಿ ಮತ್ತು  ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು, ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಿ ನೌಕರರು  ಶಾಸಕ ರಾಮಪ್ಪ  ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಕಾರ್ಯದರ್ಶಿಯಾದ ಡಿ.ಟಿ. ಮಂಜಪ್ಪ, ಖಜಾಂಚಿ ಪಿ. ಶಿವಮೂರ್ತಿ ರಾಜ್ಯ ಪರಿಷತ್ ಸದಸ್ಯ ವಿಜಯ ಮಹಾಂತೇಶ್, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ  ಹೆಚ್ ಚಂದ್ರಪ್ಪ, ಕಾರ್ಯದರ್ಶಿ ಶರಣ್‌ ಕುಮಾರ್‌ ಹೆಗಡೆ,  ಡಿ.ಎಂ. ಮಂಜುನಾಥಯ್ಯ, ಪ್ರೌ.ಶಾ.ಸ.ಶಿ. ಸಂಘದ ಜಿಲ್ಲಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಪ್ರೌ.ಶಾ.ಶಿ. ಸಂಘದ ಡಿ.ಟಿ.ತಿಪ್ಪಣ್ಣ ರಾಜು, ಅಧ್ಯಕ್ಷರು ಪ್ರೌ.ಶಾ.ಸ.ಶಿ.ಸಂಘ, ಗದಿಗೆಪ್ಪ ವೈ. ಹಳೇಮನಿ, ಕಾರ್ಯದರ್ಶಿ ಪ್ರಾ.ಶಾ.ಮು. ಸಂಘ, ಯು.ಆರ್. ರಮೇಶ್, ಪ್ರಕಾಶ್,  ಪಿಡಿಓಗಳಾದ ಶಾಮನೂರು ರಾಮನಗೌಡ ಹಾಗೂ ಅರವಿಂದ್, ಅಕ್ಷಯ್ ಕುಮಾರ್, ಬಿ ಚನ್ನಬಸಪ್ಪ, ಅಂಗಡಿ ಮಲ್ಲಿಕಾರ್ಜುನಪ್ಪ, ರಿಯಾಜ್ ಅಹಮ್ಮದ್, ಮುಸ್ತಾಕ್ ಅಹಮದ್, ಕರಿಬಸಪ್ಪ ಕುಪ್ಪೇಲೂರು, ಜ್ಯೋತಿ ಹೆಚ್.ಆರ್., ರಾಜ್ಯ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಬಾಯಿ ಫುಲೆ ಸಂಘ, ರತ್ನವ್ವ ಸಾಲಿಮಠ, ರೂಪ ಕಾಮತ್, ಅಶ್ರಫ್ ಅಲಿ ದೊಡ್ಮನಿ, ಸಿದ್ದಪ್ಪ ಸಂಗಣ್ಣನವರ್, ರಮೇಶ್, ರಫೀಕ್, ಶೋಭಾ ನಾರಾಯಣ ರೆಡ್ಡಿ, ಸುರೇಖ, ನೂರ್ ಅಹಮದ್ ಜಮಖಾನಿ, ಆರಾಧ್ಯ, ಪ್ರಭು, ಬಿ.ಎಸ್. ಶಿವಕುಮಾರ್, ಕೆ.ಹೆಚ್ ಶಿವಕುಮಾರ್ ಸೇರಿದಂತೆ ಇನ್ನು ಹಲವಾರು ಪದಾಧಿಕಾರಿ ಗಳು ನಿರ್ದೇಶಕರು ಹಾಗೂ ವೃಂದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!