ಹರಿಹರ, ಜ.2- ಕೊರೊನಾದಂತಹ ಮಾರಕ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದೇ ನಮಗಿರುವ ಏಕೈಕ ದಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರ ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು. ಕೆಂಚನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಲಾವಿದ ಡಿ.ವೆಂಕಟೇಶ್ ನೇತೃತ್ವದ ಶೃತಿ ಸಾಂಸ್ಕೃತಿಕ ಕಲಾತಂಡವು ನಾಟಕ ಅಭಿನಯಿಸಿತು. ಗ್ರಾ.ಪಂ. ಸದಸ್ಯರುಗಳಾದ ರೇಖಾ ಪ್ರಕಾಶ್, ಹನುಮಂತಪ್ಪ, ಒಕ್ಕೂಟದ ಅಧ್ಯಕ್ಷ ಹೇಮಂತರಾಜ್, ಮುಖ್ಯೋಪಾಧ್ಯಾಯ ಶಂಕರಾಚಾರ್ಯ ಮತ್ತು ಸಹ ಶಿಕ್ಷಕ ಸುನೀಲ್, ಸೇವಾಪ್ರತಿನಿಧಿ ಗಂಗಾಧರ ಭಾಗವಹಿಸಿದ್ದರು. ಮೇಲ್ವಿಚಾರಕ ಚಂದ್ರಹಾಸ್ ಸ್ವಾಗತಿಸಿದರು. ಸಮನ್ವಯಾಧಿಕಾರಿ ನಂದಿನಿ ವಂದಿಸಿದರು.