ಶ್ರದ್ಧೆಯಿಂದ ಮಾಡಿದ ಅಭ್ಯಾಸ ಮಹತ್ತರ ಸಾಧನೆಗೆ ದಾರಿ

ಅತ್ತಿಗೆರೆಯ ಶಾಲೆಯಲ್ಲಿ ಪ್ರೊ. ಹೆಚ್. ಚನ್ನಪ್ಪ ಅಭಿಮತ

ಅತ್ತಿಗೆರೆ,ಏ.3-ವಿದ್ಯಾರ್ಥಿ ಗಳು ಅತ್ಯಂತ ಆಸಕ್ತಿ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಮಹತ್ತರ ಸಾಧನೆ ಮಾಡಬಹುದು ಎಂದು ಶ್ರೀಮತಿ ಚನ್ನಪ್ಳ ಶಿವಲಿಂಗಪ್ಪ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ|| ಹೆಚ್‌.ಚನ್ನಪ್ಪ ಕರೆ ನೀಡಿದರು.

ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶಾರದಾ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.  

ಪೋಷಕರು ನಿಮ್ಮ ಬಗ್ಗೆ ತುಂಬಾ  ಆಕಾಂಕ್ಷೆಗಳನ್ನು ಹೊಂದಿರುತ್ತಾರೆ, ಉಪನ್ಯಾಸಕರೆಲ್ಲರೂ ಹೆಚ್ಚು ಕಾಳಜಿ ವಹಿಸಿ, ವೈಯಕ್ತಿಕ ಗಮನ ಕೊಟ್ಟು ಪಾಠ ಪ್ರವಚನ ಮಾಡಿರುತ್ತಾರೆ. ಅಲ್ಲದೇ ಪಠ್ಯೇತರ ಚಟುವಟಿಕೆಗಳ ಮೂಲಕ ನಿಮ್ಮ ಶೈಕ್ಷಣಿಕ ಪ್ರಗತಿಗೆ ಸತತ ಪ್ರಯತ್ನ ಮಾಡಿರುತ್ತಾರೆ. ಅವರ ಶ್ರಮ ಸಾರ್ಥಕವಾಗಬೇಕಾದರೆ ನೀವೆಲ್ಲರೂ ತೇರ್ಗಡೆಯಾಗಿ  ಕಾಲೇಜಿಗೆ ಉತ್ತಮ ಹೆಸರು ತರಬೇಕು. ಇದೇ ನೀವು ಸಲ್ಲಿಸಬೇಕಾದ ಗುರು ಕಾಣಿಕೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಹೆಚ್‌. ಚಂದ್ರಪ್ಪ ಮಾತನಾಡಿ, ಉಪನ್ಯಾಸಕ ರೆಲ್ಲ ಅತ್ಯಂತ ಪ್ರಾಮಾಣಿಕತೆಯಿಂದ ವಿಶೇಷ ತರಗತಿಗಳನ್ನು ನಡೆಸಿ, ಮಾರ್ಗದರ್ಶನ ಮಾಡಿದ್ದಾರೆ. ನೀವೆಲ್ಲರೂ ಉತ್ತಮ ಶ್ರೇಣಿಯಲ್ಲಿ ಪಾಸಾದರೆ ನಮಗೆ ಗುರು ಕಾಣಿಕೆ ಸಲ್ಲಿಸಿದಂತಾಗುತ್ತದೆ ಎಂದರು.

ಉಪನ್ಯಾಸಕರಾದ ಎನ್.ಎಸ್‌.     ಪರಮೇಶ್ವರಪ್ಪ, ಸುಭಾಷ್ ಸಿಂಧೆ, ಗುಡ್ದಪ್ಪ ಓಲಿಕಾರ್, ಬಸವರಾಜಪ್ಪ, ಶ್ರೀಮತಿ ನಾಗವೇಣಿ, ಸಲ್ಮಾ, ಶಿವಶಂಕರ್ ಮತ್ತು ಭೋಜರಾಜಪ್ಪ ಉಪಸ್ಥಿತರಿದ್ದರು.

ಅಮೃತ ಸಂಗಡಿಗರು ಪ್ರಾರ್ಥಿಸಿ ದರು. ಸಂಜನ ಸ್ವಾಗತಿಸಿದರು.ವೀರೇಶ್ ವಂದಿಸಿದರು.

error: Content is protected !!