ವೀರ ಯೋಧರನ್ನು ಸನ್ಮಾನಿಸುವುದು ಶ್ರೇಷ್ಠ ಕಾರ್ಯ

ಜಗಳೂರಿನ ಕಾರ್ಯಕ್ರಮದಲ್ಲಿ ಜಿಲ್ಲಾ ಲಯನ್ಸ್ ರಾಜ್ಯಪಾಲ ವಿಶ್ವನಾಥ ಶೆಟ್ಟಿ ಮೆಚ್ಚುಗೆ

ಜಗಳೂರು,  ಏ.3- ವೀರ ಯೋಧರು ತಮ್ಮ ಕುಟುಂಬ ಬಿಟ್ಟು  ಗಡಿಯಲ್ಲಿ ದೇಶದ ರಕ್ಷಣೆ ಮಾಡು ವುದರಿಂದ ನಾವು ನೆಮ್ಮದಿಯಾಗಿರಲು ಸಾಧ್ಯ ವಾಗಿದೆ. ಇಂತಹ ನಿವೃತ್ತ ಯೋಧರನ್ನು ಸನ್ಮಾನಿ ಸುತ್ತಿರುವುದು ಶ್ರೇಷ್ಠ ಕೆಲಸ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ವಿಶ್ವನಾಥಶೆಟ್ಟಿ ತಿಳಿಸಿದರು. 

ಪಟ್ಟಣದ ಜೆ.ಎಂ. ಇಮಾಮ್ ಶಾಲೆ ಆವ ರಣದಲ್ಲಿ ಲಯನ್ಸ್ ಕ್ಲಬ್ ಜಗಳೂರು, ಜಗಳೂರು ಅಮ್ಮ ಲಯನ್ಸ್ ಕ್ಲಬ್ ಇವರ ಆಶ್ರಯದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿಯ ನಿಮಿತ್ತ ಸೇವಾ ಕಾರ್ಯದ ಅಂಗವಾಗಿ  ನಿವೃತ್ತ ಯೋಧರನ್ನು ಸನ್ಮಾನಿಸುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

27 ಜನ ನಿವೃತ್ತ ಯೋಧರನ್ನು ಸನ್ಮಾನಿಸುವ ಮೂಲಕ ಜಗಳೂರು ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ ಯಾವುದೇ ಕ್ಲಬ್ ಮಾಡದ ವಿಶಿಷ್ಟವಾದ ಸೇವಾ ಕಾರ್ಯ ಮಾಡಿದೆ ಎಂದು ಶ್ಲ್ಯಾಘಿಸಿದರು.

ನಿವೃತ್ತ ಯೋಧರನ್ನು ಹಾಗೂ ವೀರ ಮಹಿಳೆ ಯರನ್ನು ಸನ್ಮಾನಿಸುವುದು ಅತ್ಯಂತ ಶ್ರೇಷ್ಠವಾದ ಕೆಲಸ. ಇಂತಹ ಸೇವಾ ಕಾರ್ಯ ಸಂತೃಪ್ತಿ ನೀಡುತ್ತದೆ ಎಂದು ವಿಶ್ವನಾಥಶೆಟ್ಟಿ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್. ಟಿ.ಎರ್ರಿಸ್ವಾಮಿ ಅವರು, ಜಿಲ್ಲಾ ರಾಜ್ಯ ಪಾಲರ ಭೇಟಿ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ನಿವೃತ್ತಿ ಪಡೆದ ವೀರ ಯೋಧರನ್ನು ಗೌರವ ಪೂರ್ವಕವಾಗಿ  ಸನ್ಮಾನಿಸುವುದು ಶ್ರೇಷ್ಠ ಸೇವಾ ಕಾರ್ಯವಾಗಿದೆ ಎಂದರು.

ಲಯನ್ಸ್ ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಲಯನ್ಸ್ ವಲಯ ಅಧ್ಯಕ್ಷ ವೆಂಕಟಾಚಲಂ, ಚಿತ್ರದುರ್ಗ ಜಿಲ್ಲಾ  ಲಯನ್ಸ್ ಕ್ಲಬ್ ಅಧ್ಯಕ್ಷ ಉದಯಶಂಕರ್, ರಾಜು ಕೋಟೇನ್, ಸಂಸ್ಥಾಪಕ ಅಧ್ಯಕ್ಷ  ಹುಸೇನ್ ಮಿಯ್ಯಾ ಸಾಬ್ ಉಪಸ್ಥಿತರಿದ್ದರು.

ತಾಲ್ಲೂಕಿನ ನಿವೃತ್ತ ಯೋಧರಾದ ಪಿ.ಆರ್. ವೇಮಾರೆಡ್ಡಿ, ಸಿ.ದೇವರಾಜ್, ಬಿ. ತಿಪ್ಪೇಸ್ವಾಮಿ, ಎನ್. ತಿಪ್ಪಯ್ಯ, ಸತ್ಯನಾರಾಯಣ, ವಾಸುದೇವ ರೆಡ್ಡಿ, ಗೋವಿಂದ ರೆಡ್ಡಿ, ಹೆಚ್. ರೆಹಮಾನ್‌, ಡಿ.ಹೆಚ್.ದಾದಾಪೀರ್, ಮಹಮ್ಮದ್ ರಫೀಕ್  ಸೇರಿ 27 ಜನರಿಗೆ ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.

ಡಾ.ಅನಿರುದ್‌,  ರಾಘವೇಂದ್ರ, ಸವಿತಾ ಪ್ರಕಾಶ್, ಕ್ಲಬ್‌ನ ವಾರ್ಷಿಕ ವರದಿ ಮಂಡಿ ಸಿದರು. ಶಾಹೀನಾ ಬೇಗಂ ಸ್ವಾಗತಿಸಿದರು.  

error: Content is protected !!