ಹರಿಹರದಲ್ಲಿ 7-8 ರಂದು ಅದ್ಧೂರಿ ತುಂಗಾರತಿ

ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ

ಹರಿಹರ,ಏ.3- ಕೋಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ದಂಡೆಯ ಮೇಲಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದ ಆವರಣದಲ್ಲಿ ಗಂಗಾರತಿ ಮಾದರಿಯಲ್ಲಿ ಇದೇ ದಿನಾಂಕ 7-8 ರಂದು 3 ನೇ ವರ್ಷದ ತುಂಗಾರತಿ ಕಾರ್ಯಕ್ರಮ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ ತಿಳಿಸಿದರು.

ಪುಣ್ಯಕೋಟಿ ಮಠದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿನಾಂಕ 7 ರ ಗುರುವಾರ ಸಂಜೆ 4 ಗಂಟೆಗೆ ಹರಿಹರ ನಗರದ ಶ್ರೀ ಹರಿಹರೇಶ್ವರ ದೇವಾಲಯದಿಂದ ರಂಭಾಪುರಿ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶ್ರೀಗಳನ್ನು ಸಾರೋಟಿನಲ್ಲಿ 1008 ಜನ ಮುತ್ತೈದೆ ಯರ ಪೂರ್ಣಕುಂಭ ಮತ್ತು ಸಕಲ ಕಲಾತಂಡಗ ಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುಣ್ಯಕೋಟಿ ಮಠದ ಆವರಣದಲ್ಲಿ ತುಂಗಾರತಿ ಮಂಟಪಕ್ಕೆ ಕರೆ ತರಲಾಗುವುದು ಎಂದು ಹೇಳಿದರು.

ದಿನಾಂಕ 8 ರಂದು ಶುಕ್ರವಾರ ಸಂಜೆ 4 ಗಂಟೆಗೆ ತುಂಗಾರತಿ ಧಾರ್ಮಿಕ ಸಭೆ ನಡೆಯಲಿದೆ. ಸಾನ್ನಿಧ್ಯವನ್ನು ರಂಭಾಪುರಿ ಜಗದ್ಗುರುಗಳು  ವಹಿಸಲಿದ್ದಾರೆ. ವಿಶ್ವಮಾತಾ ಪುಣ್ಯಕೋಟಿ ಪ್ರಶಸ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು.

ಸಮ್ಮುಖ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ ಶಾಂತವೀರ ಮಹಾಸ್ವಾಮೀಜಿ, ನೇತೃತ್ವ ಸೊಲ್ಲಾಪುರದ ಗೌಡಗಾಂವ್‌ನ ಸಂಸದ ಡಾ.ಜಯಸಿದ್ದೇಶ್ವರ ಮಹಾಸ್ವಾಮೀಜಿ ವಹಿಸಲಿದ್ದಾರೆ. ಉಪದೇಶಾಮೃತ ಮುಕ್ತಿಮಂದಿರದ ಶ್ರೀ ವಿಮಲ ರೇಣುಕಾ ವೀರ ಮುಕ್ತಿಮುನಿ ಮಹಾಸ್ವಾಮಿಗಳಿಂದ ನಡೆಯಲಿದೆ. ಪುಣ್ಯಕೋಟಿ ಜ್ಞಾನ ಭಂಡಾರ ಪ್ರಶಸ್ತಿಯನ್ನು ಅಥಣಿ ಮೂಟಗಿಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿಗೆ ಪ್ರಧಾನ ಮಾಡಲಾಗುವುದು.

ತುಂಗಾರತಿ ಉದ್ಘಾಟನೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ನಡೆಸಿಕೊಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು   ಶಾಸಕ ಅರುಣ್ ಕುಮಾರ್ ಪೂಜಾರ್, ಪುಣ್ಯಕೋಟಿ ಕ್ಯಾಲೆಂಡರ್ ಬಿಡುಗಡೆಯನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಕ್ಕಿ ಆಲೂರು ಶ್ರೀ ಚಂದ್ರಶೇಖರ್ ಸ್ವಾಮೀಜಿ, ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ತೋಟಗಾರಿಕೆ ಸಚಿವ ಮುನಿರತ್ನ, ಸಿಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್, ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ, ಆಚಾರ್ಯ ವ ಮಹಾಚಾರ್ಯ ಸೇವಾ ವಿಭೂಷಣ, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗವಹಿಸಲಿದ್ದಾರೆ.

ಸಂಗೀತಯುಕ್ತ ತುಂಗಾರತಿಯ ನೇತೃತ್ವ ರಾಣೇಬೆನ್ನೂರು ಹಿರೇಮಠದ ಶ್ರೀ ಶಿವಯೋಗಿ ಸ್ವಾಮೀಜಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಚೆನ್ನಬಸವ ಶ್ರೀಗಳು, ವೀರಭದ್ರ ಶ್ರೀಗಳು, ಗುರುಲಿಂಗ ಶ್ರೀಗಳು, ಬಸವಪ್ರಭು ಶ್ರೀಗಳು, ಮಹೇಶ್ವರ ಶ್ರೀಗಳು, ವೃಷಭಲಿಂಗ ಶ್ರೀಗಳು, ಪ್ರಭು ಶಾಂತಲಿಂಗ ಶ್ರೀಗಳು, ಶಾಂತವೀರ ಶ್ರೀಗಳು, ಚನ್ನಬಸವದೇವರು ಉಪಸ್ಥಿತರಿರಲಿದ್ದಾರೆ.

ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಎಸ್. ರಾಮಪ್ಪ, ಶ್ರೀನಿವಾಸ ಮಾನೆ, ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯರಾದ  ಆರ್.‌ಶಂಕರ್ , ನಾಗರಾಜ್ ಛಬ್ಬಿ, ಎಸ್.ವಿ. ಸಂಕನೂರು, ಪ್ರದೀಪ್ ಶೆಟ್ಟರ್,  ಮಾಜಿ ಸಚಿವ ರಾದ ಹೆಚ್. ಆಂಜನೇಯ, ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ಸೋಮಣ್ಣ ಬೇವಿನಮರದ,  ರಾಣೇಬೆನ್ನೂರಿನ ಪ್ರಕಾಶ್ ಕೋಳಿವಾಡ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್.

ಸಂತೋಭಟ್, ಸಂಜಯ್ ಶೆಟ್ಟಣ್ಣ, ಮಹಾಂತೇಶ್ ಬೀಳಗಿ, ಹನುಮಂತರಾಯ, ಸಿ.ಬಿ. ರಿಷ್ಯಂತ್, ಮಲ್ಲಿಕಾರ್ಜುನ ಗುಂಗೆ, ಅಜಯಗುಪ್ತ ಅವರು ಗೌರವ ಶ್ರೀರಕ್ಷೆ ಪಡೆಯಲಿದ್ದಾರೆ.

ತಪೋವನ ಆಯುರ್ವೇದ ಕಾಲೇಜಿನ ಡಾ.ಶಶಿಕುಮಾರ್ ಮೆಹರ್ವಾಡೆ ಗೌರವ ಸನ್ಮಾನ ಪಡೆಯಲಿದ್ದಾರೆ. ಕೋಡಿಯಾಲ ಹೊಸಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಚೇತನ್ ಮಂಜಣ್ಣ ಪೂಜಾರ್ ಇತರರು ಭಾಗವಹಿಸಲಿದ್ದಾರೆ.  

ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಹಳ್ಳೆಳ್ಳಪ್ಪನವರ್, ಮಾಜಿ ಸದಸ್ಯ ಕರಿಯಪ್ಪ ಮಾಳಗಿ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!