ಮಾಜಿ ಪ್ರಧಾನಿ ವಾಜಪೇಯಿ ಅಜಾತ ಶತ್ರು

ಮಾಜಿ ಪ್ರಧಾನಿ ವಾಜಪೇಯಿ ಅಜಾತ ಶತ್ರು

ದಾವಣಗೆರೆ, ಡಿ. 25- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದ ಅಂಗವಾಗಿ ಇಲ್ಲಿನ ಸರಸ್ವತಿ ನಗರ ಬಿ ಬ್ಲಾಕ್‌ನಲ್ಲಿರುವ ಉದ್ಯಾನವನಕ್ಕೆ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಎಂದು ನಾಕರಣ ಮಾಡಿ ಉದ್ಘಾಟಿಸಲಾಯಿತು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಉದ್ಯಾನವನ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಯಾರೂ ದ್ವೇಷಿಸದಂತಹ ಧೀಮಂತ ನಾಯಕ ವಾಜಪೇಯಿ ಅವರು. ಅವರಿಂದಾಗಿಯೇ ದೇಶದ ಹಳ್ಳಿ ಹಳ್ಳಿಗಳಿಗೂ ಸಂಪರ್ಕ ಸಾಧ್ಯವಾಗಿ, ದೇಶ ಅಭಿವೃದ್ಧಿ ಪಥದತ್ತ ಸಾಗಲು ಕಾರಣವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 33ನೇ ವಾರ್ಡ್‌ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಮುಖಂಡರಾದ ಲೋಕಿಕೆರೆ ನಾಗರಾಜ್, ಮುಪ್ಪಣ್ಣ, ಎಲ್.ಎನ್. ಕಲ್ಲೇಶ್, ಶಂಕರ್ ಸಿಂಗ್ ನಾಯಕ್, ಜಯ ನಾಯಕ್, ಎಚ್.ಬಸಣ್ಣ,  ಮಂಜುನಾಥ್ ಸ್ವಾಮಿ, ನಾಗರಾಜ್, ಎನ್.ಸುನಿಲ್,  ಆಂಜನಪ್ಪ, ತಿಪ್ಪೇಶ್ ನಾಯಕ್, ಶಾಮ್ ನಾಯಕ್, ವಿಜಯ, ಸೋಮಶೇಖರ್ ಕಾಡಜ್ಜಿ, ಮಂಜುಳಮ್ಮ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!