ದಾವಣಗೆರೆ, ಜ.14- ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಆದೇಶದಂತೆ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ದೇಶಾದ್ಯಂತ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಶ್ರೀ ವೀರಮದಕರಿ ನಾಯಕ ವೃತ್ತದ ಬಳಿ ಇರುವ ಕೇದಾರ ಲಿಂಗೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರುಗಳಾದ ಯಶವಂತರಾವ್ ಜಾಧವ್, ಬಿ.ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಕೆ. ಪ್ರಸನ್ನಕುಮಾರ್, ಕೊಳೇನಹಳ್ಳಿ ಸತೀಶ್, ಕಿಶೋರ್ ಕುಮಾರ್, ಪುಷ್ಪ ವಾಲಿ, ಭಾಗ್ಯ ಪಿಸಾಳೆ, ಗಾಯತ್ರಮ್ಮ ಖಂಡೋಜಿರಾವ್, ಡಿ.ಎಲ್.ಶಿವಪ್ರಕಾಶ್, ಶಿವಾನಂದ, ಸೋಗಿ ಶಾಂತಕುಮಾರ್, ರಾಜನಹಳ್ಳಿ ಶಿವಕುಮಾರ್, ಎಲ್. ಎನ್. ಕಲ್ಲೇಶ್, ರಾಜಶೇಖರ್, ಗಂಗಾಧರ್, ಸಂತೋಷ್ (ಕೋಟಿ), ಲೀಲಮ್ಮ, ವೈ. ಶಿವನಂದ, ಶಂಕರಗೌಡ, ಟಿಂಕರ್ ಮಂಜಣ್ಣ, ಗುರು ಸೋಗಿ, ಸಚಿನ್ ವೆರ್ಣೆಕರ್ ಇತರರು ಈ ಸಂದರ್ಭದಲ್ಲಿದ್ದರು.