ಟಿ.ವಿ., ಮೊಬೈಲ್‌ಗಳಿಗೆ ದಾಸರಾಗುತ್ತಿರುವ ಯುವ ಪೀಳಿಗೆ-ಡಿವೈಎಸ್ಪಿ ವೆಂಕಟಪ್ಪ ನಾಯಕ ವ್ಯಾಕುಲತೆ

ಟಿ.ವಿ., ಮೊಬೈಲ್‌ಗಳಿಗೆ ದಾಸರಾಗುತ್ತಿರುವ ಯುವ ಪೀಳಿಗೆ-ಡಿವೈಎಸ್ಪಿ ವೆಂಕಟಪ್ಪ ನಾಯಕ ವ್ಯಾಕುಲತೆ

ಹರಪನಹಳ್ಳಿ, ಡಿ.21- ಯುವ ಪೀಳಿಗೆ ಟಿ.ವಿ. ಮತ್ತು ಮೊಬೈಲ್‌ಗಳಿಗೆ ದಾಸರಾಗಿ   ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಡಿವೈ ಎಸ್ಪಿ  ವೆಂಕಟಪ್ಪ ನಾಯಕ ವ್ಯಾಕುಲತೆ ವ್ಯಕ್ತಪಡಿಸಿದರು.

ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಿಲ್ಲಾ ಪೊಲೀಸ್ ಹಾಗೂ ಹರಪನಹಳ್ಳಿ ಉಪವಿಭಾಗದ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿ ಕಷ್ಟಪಟ್ಟು ಮಕ್ಕಳನ್ನು ವಿದ್ಯಾವಂತವರನ್ನಾಗಿ ಮಾಡಬೇಕೆಂದು ಉದ್ಧೇಶ ಹೊಂದಿ ಕಾಲೇಜಿಗೆ ಕಳಿಸಿದರೆ, ಕೆಲವು ವಿದ್ಯಾರ್ಥಿಗಳು ದುಷ್ಟ ಚಟಗಳಿಗೆ ದಾಸರಾಗಿ ಅನೇಕ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಟ್ಟು ಹೆತ್ತ ತಂದೆ ತಾಯಿಗಳಿಗೂ ಕೀರ್ತಿ ತರುವಂತರಾಗಬೇಕು. ವಿದ್ಯಾರ್ಥಿಗಳು  ದುಶ್ಚಟಗಳಿಗೆ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳುಮಾಡಿ ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದ ರಿಂದಾಗುವ ದುಷ್ಪರಿಣಾ ಮಗಳ ಬಗ್ಗೆ ಚಿಂತನೆ ಮಾಡಿ, ದುಶ್ಚಟ ಗಳಿಂದ ದೂರವಾಗಿರಿ, ಕಷ್ಟಪಟ್ಟು ಓದಿದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದು  ಎಂದರು.

ಬಳ್ಳಾರಿ ವಿ.ವಿ. ಸಂಘದ ಅಧ್ಯಕ್ಷ  ರಾಮನಗೌಡ್ರು ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಜ್ಞಾನವನ್ನು ಹೆಚ್ಚಿಸುವಂತಾದಾಗುತ್ತದೆ ಎಂದು ಹೇಳಿದರು. 

ವಿವಿ ಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ್ರು ಮಾತನಾಡಿ,  ಬಳ್ಳಾರಿ ಜಿಲ್ಲೆಯಲ್ಲಿಯೇ ನಮ್ಮ ಸಂಸ್ಥೆಯಿಂದ ನ್ಯಾಕ್‌ನಲ್ಲಿ ಹರಪನಹಳ್ಳಿಯ ನಮ್ಮ ಕಾಲೇಜಿಗೆ ಬಿ+ ಗ್ರೇಡ್ ಬಂದಿದೆ. ಇದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಅಂಬ್ಲಿ ಮಂಜುನಾಥ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೋರಿ ವಿರುಪಾಕ್ಷಪ್ಪ, ನಿವೃತ್ತ ಉಪನಿರ್ದೇಶಕ, ಆಹಾರ ಸರಬರಾಜು ಬಳ್ಳಾರಿ ಬಿ.ಹೆಚ್. ಬಸವರಾಜು, ಆಡಳಿತ ಮಂಡಳಿಯ ಸದಸ್ಯರುಗಳಾದ ಕೆ.ಎಂ. ಬಸವರಾಜಯ್ಯ, ಅಮೃತ ಮಂಜುನಾಥ, ಶೈಲಾ ಅಂಬ್ಲಿ, ಪಿ.ಟಿ. ದೊಡ್ಡಬಸಪ್ಪ, ಪ್ರಾಂಶುಪಾಲ ಸಿದ್ದಲಿಂಗಮೂರ್ತಿ, ಬಸವರಾಜ, ಸೊಂಡುರಿನ ಗಣಿ ಮಾಲೀಕ ವೀರಭದ್ರಪ್ಪ, ಚನ್ನಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!