ರಾಷ್ಟ್ರಧ್ವಜ – ರಾಷ್ಟ್ರಗೀತೆ ಕಾರ್ಯಾಗಾರ
ದಾವಣಗೆರೆ, ಆ. 11 – ಧ್ವಜಾ ರೋಹಣ ಹಾಗೂ ರಾಷ್ಟ್ರಗೀತೆಯ ಕುರಿತ ಎಲ್ಲಾ ಶಿಷ್ಟಾಚಾರಗಳನ್ನು ಅರಿತು ದೇಶಭಕ್ತಿಯೊಂದಿಗೆ ಧ್ವಜಾರೋಹಣ ನೆರವೇರಿಸಬೇಕು ಎಂದು ಮೀಸಲು ಪಡೆಯ ಡಿವೈಎಸ್ಪಿ ಪ್ರಕಾಶ್ ಅವರು ಕರೆ ನೀಡಿದ್ದಾರೆ.
ನಗರದ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಆಯೋಜಿಸ ಲಾಗಿದ್ದ ರಾಷ್ಟ್ರಧ್ವಜ – ರಾಷ್ಟ್ರಗೀತೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲಾಡ ಳಿತ, ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗೆ ರಾಷ್ಟ್ರ ಧ್ವಜಾರೋಹಣದ ಕುರಿತು ತರಬೇತಿ ನೀಡಲಾಯಿತು.
ರಾಷ್ಟ್ರಧ್ವಜದ ಕುರಿತು ಸಾಕ್ಷರ ರಾಗಬೇಕು, ಶಿಷ್ಟಾ ಚಾರಗಳನ್ನು ತಿಳಿಯಬೇಕು. ರಾಷ್ಟ್ರಧ್ವಜ ಆರೋ ಹಣ ಹಾಗೂ ಅವರೋಹಣ ಮತ್ತು ಅತಿಥಿಗಳನ್ನು ಸ್ವಾಗತಿಸುವು ದರಿಂದ ಹಿಡಿದು ರಾಷ್ಟ್ರಗೀತೆ ಹಾಡುವುದ ವರೆಗೆ ಸೂಕ್ತ ತಿಳುವಳಿಕೆ ಹೊಂದ ಬೇಕು ಎಂದವರು ತಿಳಿಸಿದರು.
ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ. ರಾಷ್ಟ್ರಧ್ವಜಾರೋಹಣ ಮಾಡುವುದು ದೇಶಭಕ್ತಿಯ ಕಾರ್ಯ. ಈ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ನಿಯಮಗಳಿಗೆ ಅನುಗುಣವಾಗಿ ನೆರವೇರಿಸಬೇಕು ಎಂದು ತಿಳಿಸಿದರು.ರಾಷ್ಟ್ರಗೀತೆಯಲ್ಲಿನ ಕೆಲ ಪದಗಳನ್ನು ತಪ್ಪಾಗಿ ಉಚ್ಛರಿಸುವು ದನ್ನು ಕೆಲವರು ಪದ್ಧತಿ ಮಾಡಿಕೊಂಡಿ ರುತ್ತಾರೆ. ಇದನ್ನು ತಪ್ಪಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇವಾ ದಳದ ಜಿಲ್ಲಾ ಅಧ್ಯಕ್ಷ ಚನ್ನಪ್ಪ ಹೆಚ್. ಪಲ್ಲಾಗಟ್ಟೆ, ಸೇವಾ ದಳವು ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಸಂಬಂಧಿ ಸಿದಂತೆ ಶಿಷ್ಟಾಚಾರದ ತರಬೇತಿ ನೀಡುತ್ತಾ ಬಂದಿದೆ. ಇದಕ್ಕಾಗಿ ಸೇವಾ ದಳದ ತಂಡವನ್ನೇ ಸಜ್ಜುಗೊಳಿಸಲಾ ಗಿದೆ ಎಂದರು. ಈ ಸಂದರ್ಭದಲ್ಲಿ ಸೇವಾ ದಳದ ವಲಯ ಸಂಘಟಕ ಎಂ. ಅಣ್ಣಯ್ಯ, ಸೇವಾ ದಳದ ಸಂಪ ನ್ಮೂಲ ವ್ಯಕ್ತಿಗಳಾದ ಟಿ.ಎಸ್. ಕುಮಾ ರಸ್ವಾಮಿ, ಗೋಪಾ ಲಪ್ಪ, ಮುಖ್ಯ ಪೇದೆ ಪುಟ್ಟಪ್ಪ ಉಪಸ್ಥಿತರಿದ್ದರು.