ನಗರದಲ್ಲಿ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳು
ದಾವಣಗೆರೆ, ಆ. 9- ಭಾರತ ಅಧ್ಯಾತ್ಮದ ತವರೂರು. ಧರ್ಮ ದರ್ಶನಗಳ ಬೀಡು. ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರಾಗಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
ನಗರದ ಅಭಿನವ ರೇಣುಕ ಮಂದಿರದಲ್ಲಿ ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಬಾಳೆಹೊನ್ನೂ ರು, ದಾವಣಗೆರೆ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿ ರುವ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಪ್ರಗತಿ ಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶವಾಗಬಾರದು. ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಅಮೂಲ್ಯ ಸಂಪತ್ತೆಂದು ಅರಿಯಬೇಕೆಂದರು.
ದೇವರ ಮೇಲಿನ ನಂಬಿಕೆ ಮನುಷ್ಯನ ಬಾಳಿಕೆ ಶಾಶ್ವತ ನಂದಾ ದೀಪ. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಬೋಧಿಸುವ ಮೂಲಕ ಸಮಾಜ ದಲ್ಲಿ ಸಾಮರಸ್ಯ, ಸೌಹಾರ್ಧತೆ ಬೆಳೆಸಿದ ಕೀರ್ತಿ ಗುರು ಪರಂಪರೆಗೆ ಸಲ್ಲುತ್ತದೆ ಎಂದು ಹೇಳಿದರು.
ಅಹಿಂಸಾದಿ ಧ್ಯಾನ ಪರ್ಯಂ ತರವಾದ ದಶ ಧರ್ಮ ಸೂತ್ರಗಳ ಮೂಲಕ ಜನಜಾಗೃತಿಗೈದ ಇತಿಹಾ ಸವನ್ನು ಅರಿಯಬೇಕಾಗಿದೆ. ಅತ್ಯಂತ ಪ್ರಾಚೀನ ಇತಿಹಾಸ ಮತ್ತು ಪರಂ ಪರೆ ಹೊಂದಿದ ವೀರಶೈವ ಧರ್ಮ ದ ಸಂರಕ್ಷಣೆ ಮತ್ತು ಪರಿಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿ ಸಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿ, ರಂಭಾಪುರಿ ಪೀಠ ನಾಡಿನುದ್ದಗಲಕ್ಕೂ ಅಧ್ಯಾ ತ್ಮದ ಅರಿವನ್ನು ಮೂಡಿಸುವ ಕೆಲಸ ವನ್ನು ಮಾಡುತ್ತಾ ಬಂದಿದ್ದು, ಶ್ರೀ ಪೀಠ ಧಾರ್ಮಿಕ ಕ್ಷೇತ್ರದಲ್ಲಿ ಅದ್ವಿ ತೀಯ ಸಾಧನೆಗೈದಿರುವುದು ಸಂತ ಸದ ವಿಚಾರ. ಪಂಚಪೀಠಗಳಲ್ಲೇ ರಂಭಾಪುರಿ ಪೀಠಕ್ಕೆ ಅಗ್ರಸ್ಥಾನವಿದೆ. ಶ್ರೇಷ್ಠ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.
ರಂಭಾಪುರಿ ಜಗದ್ಗುರುಗಳು ನಿರಂತರವಾಗಿ ಧರ್ಮ ಜಾಗೃತಿ ಮಾಡುತ್ತಿರುವುದು ಭಕ್ತ ಸಂಕುಲದ ಸೌಭಾಗ್ಯ. ಪೀಠದ ಸೇವೆ ಅನನ್ಯವಾದುದು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರೂ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ ಮಾನಸಿಕ ಶಾಂತಿ, ನೆಮ್ಮದಿಗೆ ಧರ್ಮವೇ ಮೂಲ. ಮನುಷ್ಯನಿಗೆ ಅಧ್ಯಾತ್ಮದ ಅರಿವು ಆಚರಣೆ ಮುಖ್ಯ ಎಂದು ತಿಳಿಸಿದರು.
ಮನುಷ್ಯ ಸಾರ್ಥಕ ಜೀವನದ ಕಡೆ ಹೆಜ್ಜೆ ಹಾಕಬೇಕಾಗಿದೆ. ಸಮಾಜಕ್ಕೆ ಒಳಿತನ್ನು ಬಯಸುವ ಜೊತೆಗೆ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ತಿಳಿಯಬೇಕಾಗಿದೆ ಎಂದರು.
ನಾಡಿನ ಪ್ರಮುಖ ಮಠಗಳು ಅನ್ನ ದಾಸೋಹ, ಜ್ಞಾನ ದಾಸೋಹದ ಮೂಲಕ ಸಮಾಜಕ್ಕೆ ಅಭೂತಪೂರ್ವ ಕೊಡುಗೆ ನೀಡುತ್ತಾ ಬಂದಿವೆ. ನಮ್ಮಿಂದ ಒಳಿತು ಮಾಡಲು ಸಾಧ್ಯವಾಗದಿದ್ದರೂ ಕೆಡುಕನ್ನು ಬಯಸಬಾರದು. ಜೀವನದಲ್ಲಿ ನಗು ಮುಖ್ಯ. ಯಾರನ್ನೂ ಸಹ ಅಲಕ್ಷಿಸದೇ ಒಟ್ಟಿಗೆ ಬಾಳು ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕೊಟ್ಟೂರು ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತವನ್ನಿತ್ತರು. ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ರಾಧಕೃಷ್ಣ ಗುಪ್ತ ಜ್ಯುವೇಲರ್ಸ್ ಮಾಲಿಕ ರಾಜನಹಳ್ಳಿ ರಮೇಶ್ ಬಾಬು ಅವರಿಗೆ `ಸಮಾಜ ಸೇವಾ ವಿಭೂಷಣ’ ಪ್ರಶಸ್ತಿ ಪ್ರದಾನದೊಂದಿಗೆ ಗೌರವ ಶ್ರೀರಕ್ಷೆ ನೀಡಲಾಯಿತು.
ನರರೋಗ ತಜ್ಞ ಡಾ. ವೀರಣ್ಣ ಗಡದ, ಮಾರುತಿ ರೈಸ್‌ಮಿಲ್ ಮಾಲೀಕ ವೈ. ವಿರೂಪಾಕ್ಷಪ್ಪ, ಪಾಲಿಕೆ ಲೆಕ್ಕಾಧಿಕಾರಿ ನಾಮದೇವ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕರೇಶಿವಪ್ಳರ ಸಿದ್ದೇಶ್ ಮತ್ತಿತರೆ ಗಣ್ಯರಿಗೆ ಗುರು ರಕ್ಷೆ ನೀಡಲಾಯಿತು.
ಹರಿಹರದ ಗಾಯಕ ಕಾಂತರಾಜ್ ಸಂಗೀತ ಸೇವೆ ನೀಡಿದರು. ವೀರೇಶ ಬಡಿಗೇರ ತಬಲಾ ಸಾಥ್ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ಜಯದೇವ ದೇವರಮನಿ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವೀರಣ್ಣ ಬಿ. ಶೆಟ್ಟರ ನಿರೂಪಿಸಿದರು. ದೇವರಮನಿ ಚನ್ನಬಸಪ್ಪ ಜಗದ್ಗುರುಗಳಿಗೆ ಮಾಲಾರ್ಪಣೆ ಮಾಡಿದರು.